ಬಡ ರೋಗಿಗಳ ಪಾಲಿಗೆ ಸಂಜೀವಿನಿಯಾಗಿರುವ ಜಿಲ್ಲಾಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಲು ಸರ್ಕಾರ ತೀರ್ಮಾನಿಸಿದೆ. ಧಾರವಾಡ, ಯಾದಗಿರಿ, ದಾವಣಗೇರಿ, ಮೈಸೂರು ಸೇರಿದಂತೆ 7 ಜಿಲ್ಲಾಸ್ಪತ್ರೆಗಳಲ್ಲಿ ಎಮ್ ಆರ್ ಐ ಹಾಗೂ ಸಿ ಟಿ ಸ್ಕ್ಯಾನಿಂಗ್ ಸೇವೆ ಪ್ರಾರಂಭಿಸಲು ಸರ್ಕಾರ 47.41 ಕೋಟಿ ಹಣ ನೀಡಲು ಒಪ್ಪಿಗೆ ಸೂಚಿಸಿದೆ. ಜಿಲ್ಲಾಸ್ಪತ್ರೆಗಳಲ್ಲಿ ಧಾಖಲಾಗುವ ಬಡ ರೋಗಿಗಳು ಇಷ್ಟು ದಿನ ಸಾವಿರಾರು ರೂಪಾಯಿ ಕೊಟ್ಟು ಬೇರೆ ಕಡೆ ಸ್ಕ್ಯಾನಿಂಗ ಮಾಡಿಸಿಕೊಂಡು ಬರಬೇಕಿತ್ತು. ಸರ್ಕಾರದ ಈ ನಿರ್ಧಾರ ಬಡ ರೋಗಿಗಳ ಪಾಲಿಗೆ ಸಮಾಧಾನ ತಂದುಕೊಟ್ಟಿದೆ.
