ವಿಜ್ಞಾನ, ತಂತ್ರಜ್ಞಾನ ಬೆಳೆದಂತೆಲ್ಲ, ಸೈಬರ್ ವಂಚಕರ ಹಾವಳಿ ಜೋರಾಗಿದೆ. ಸೈಬರ್ ವಂಚಕನೊಬ್ಬ ಶಿಗ್ಗಾವಿಯ ಜಾನಪದ ವಿಶ್ವವಿಧ್ಯಾಲಯದ ಕುಲಪತಿ ಟಿ ಎಮ್ ಬಾಸ್ಕರ್ ಎಂಬುವವರಿಗೆ ವಂಚಿಸಿದ್ದಾನೆ. ಫೋನ್ ಪೇ ಮೂಲಕ ದಿನದ ವ್ಯವಹಾರ 60 ಸಾವಿರ ರೂಪಾಯಿ ಗರಿಷ್ಟ ಮಿತಿ ತಲುಪಲು, ಕುಲಪತಿ ನಂಬರಿಗೆ ಲಿಂಕ್ ಕಳಿಸಿದ್ದಾನೆ. ವಂಚಕ ಧಾರವಾಡದ ಎಸ್ ಬಿ ಐ ಬ್ಯಾಂಕ ಉದ್ಯೋಗಿ ಎಂದು ಪರಿಚಯಿಸಿಕೊಂಡಿದ್ದರಿಂದ, ವಂಚಕನನ್ನು ನಂಬಿದ ಕುಲಪತಿ ಭಾಸ್ಕರ ಲಿಂಕ್ ತೆರೆದಿದ್ದಾರೆ. ಕ್ಷಣ ಮಾತ್ರದಲ್ಲಿ ಕುಲಪತಿ ಖಾತೆಯಲ್ಲಿದ್ದ 60098 ರೂಪಾಯಿ ಮಂಗಮಾಯವಾಗಿದೆ. ಕುಲಪತಿ ಭಾಸ್ಕರ, ಶಿಗ್ಗಾವಿ ಠಾಣೆಯಲ್ಲಿ ದೂರು ಧಾಖಲಿಸಿದ್ದಾರೆ. ವಂಚಕ ತನ್ನನ್ನು ನವೀನಕುಮಾರ ಎಂದು ಪರಿಚಯಿಸಿಕೊಂಡಿದ್ದು,7630832174 ನಂಬರಿನಿಂದ ಕರೆ ಮಾಡಿ ವಂಚನೆ ಮಾಡಿದ್ದಾನೆ.
u
