ಬೀದರ ಸಂಸದ ಮತ್ತು ಕೇಂದ್ರ ಸಚಿವ ಭಗವಂತ ಖೂಬಾ ನನ್ನ ಕೊಲೆ ಮಾಡಿಸಲು ಸಂಚು ರೂಪಿಸಿದ್ದಾರೆ ಎಂದು ಔರಾದ ಶಾಸಕ ಮಾಜಿ ಸಚಿವ ಪ್ರಭು ಚೌಹಾನ ಗಂಭೀರ ಆರೋಪ ಮಾಡಿದ್ದಾರೆ. ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಪ್ರಭು ಚೌಹಾಣ ಕೇಂದ್ರ ಸಚಿವರ ಮೇಲೆ ಕಿಡಿಕಾರಿದ್ದಾರೆ. ಭಾಷಣದುದ್ದಕ್ಕೂ ಭಗವಂತ ಖೂಬಾ ಮೇಲೆ ವಾಗ್ದಾಳಿ ನಡೆಸಿದ ಚೌಹಾಣ, ಕೇಂದ್ರ ಸಚಿವರು ಕೆಲ ಕಾಂಗ್ರೇಸ ಪುಡಾರಿಗಳ ಜೊತೆ ಸ್ನೇಹ ಸಂಪಾದಿಸಿದ್ದಾರೆ ಎಂದು ಆರೋಪಿಸಿದ್ದಾರೆ.
