ಪ್ರೀತಿ, ಪ್ರೇಮ್ ಅಂತಾ ಓಡಾಡಿಕೊಂಡಿದ್ದ ಮೂವರು ಯುವಕರ ಮೇಲೆ ಮತ್ತೊಂದು ಗುಂಪಿನ ಯುವಕರು ಮೂವರಿಗೆ ಚಾಕು ಇರಿದ ಘಟನೆ ಧಾರವಾಡದ ಎಲ್ ಐ ಸಿ ಕಚೇರಿ ಬಳಿ ನಡೆದಿದೆ. ಜನನಿಬೀಡ ರಸ್ತೆಯಲ್ಲಿ ನಡೆದ ಘಟನೆ ಆತಂಕಕ್ಕೆ ಕಾರಣ ಸೃಷ್ಟಿಸಿದೆ. ಕಿರಣ, ಆಸೀಫ್, ಹಾಗೂ ಶಾನವಾಜ ಎಂಬ ಮೂವರು ಯುವಕರ ಹೊಟ್ಟೆಗೆ ಚಾಕು ಇರಿಯಲಾಗಿದೆ. ಯುವತಿ ವಿಚಾರವಾಗಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಗೆಳೆಯನ ಪ್ರಿಯತಮೆಗಾಗಿ ಈ ಘಟನೆ ನಡೆದಿದ್ದು ಸ್ಥಳಕ್ಕೆ ಉಪನಗರ ಪೊಲೀಸರು ದೌಡಾಯಿಸಿದ್ದಾರೆ. ಕಿರಣ ಎಂಬುವವನ ಹೊಟ್ಟೆಯಲ್ಲಿ ಚಾಕು ಹೊಕ್ಕಿದ್ದು, ಪ್ರಾಥಮಿಕ ಚಿಕಿತ್ಸೆ ನಂತರ ಗಾಯಾಳುಗಳನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಧಾರವಾಡದಲ್ಲಿ ರೌಡಿಗಳ ಹಾವಳಿ ಹೆಚ್ಚಾಗಿದ್ದು, ಪೊಲೀಸರು ಅಂತವರ ಹೆಡಮುರಿಗೆ ಕಟ್ಟಬೇಕಾಗಿದೆ.
