ರಾಹುಲ್ ಗಾಂಧಿಯ ಫ್ಲೈಯಿಂಗ್ ಕಿಸ್ ಗೆ ಸಂಬಂದಿಸಿದಂತೆ ವಿವಾದ ಹುಟ್ಟು ಹಾಕಿರುವ ಕೇಂದ್ರ ಸಚಿವೆ ಸ್ಮೃತಿ ಇರಾಣಿಗೆ ಬಿಹಾರದ ಕಾಂಗ್ರೇಸ್ ಶಾಸಕಿ ನೀತು ಸಿಂಗ ತಿರುಗೇಟು ಕೊಟ್ಟಿದ್ದಾರೆ. ರಾಹುಲ್ ಗೆ ಫ್ಲೈಯಿಂಗ್ ಕಿಸ್ ಕೊಡಲು ಸಾಕಷ್ಟು ಹುಡುಗಿಯರಿದ್ದಾರೆ. 50 ವರ್ಷದ ಮಹಿಳೆಗೆ ಫ್ಲೈಯಿಂಗ್ ಕಿಸ್ ಕೊಡುವ ಅಗತ್ಯ ಏನಿದೆ ಎಂದು ನೀತು ಸಿಂಗ ಹೇಳಿದ್ದಾರೆ. ಈ ವಿಷಯ ಇದೀಗ ಮತ್ತೊಂದು ತಿರುವು ಪಡೆದಿದ್ದು, ಕಾಂಗ್ರೇಸ್ ಗೆ ಮಹಿಳೆಯರ ಮೇಲೆ ಗೌರವವಿಲ್ಲ ಎಂದು ಬಿಜೆಪಿ ಮುಖಂಡರು ಕಿಡಿ ಕಾರಿದ್ದಾರೆ. ನೀತು ಸಿಂಗರ ಹೇಳಿಕೆಗೆ ಬಿಜೆಪಿಗರು ವಾಕ್ಸಮರ ಸಾರಿದ್ದಾರೆ.
