ರಾಹುಲ್ ಗಾಂಧಿ
ಸಂಸತ್ತಿನಲ್ಲಿ ಕೊಟ್ಟ ಫ್ಲೈಯಿಂಗ್ ಕಿಸ್ ವಿಷಯಕ್ಕೆ ಸಂಬಂಧಿಸಿದಂತೆ ಬಿಜೆಪಿ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ಅದು ಫ್ಲೈಯಿಂಗ್ ಕಿಸ್ ಅಲ್ಲವೇ ಅಲ್ಲಾ ಎಂದು ದಿಗ್ವಿಜಯಸಿಂಗ ಹೇಳಿದ್ದಾರೆ.
ಮಣಿಪುರ ವಿಷಯಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ತಪ್ಪು ಮಾಹಿತಿ ಕೊಟ್ಟಿದ್ದಾರೆ ಎಂದು ಹಿರಿಯ ಕಾಂಗ್ರೇಸ್ ನಾಯಕ ದಿಗ್ವಿಜಯಸಿಂಗ ಆರೋಪಿಸಿದ್ದಾರೆ. ಕೇವಲ ರಾಜಕೀಯ ಭಾಷಣ ಮಾಡಿರುವ ನರೇಂದ್ರ ಮೋದಿಯವರು ಮಣಿಪುರದಲ್ಲಿ ಶಾಂತಿ ನೆಲೆಸುವ ಕ್ರಮ ಕೈಗೊಂಡಿಲ್ಲ ಎಂದು ತಿಳಿಸಿದ್ರು. ಕರ್ನಾಟಕದ ಕಾಂಗ್ರೇಸ್ ಸರ್ಕಾರ ನೀಡಿರುವ ಐದು ಗ್ಯಾರೆಂಟಿಗಳ ಕುರಿತು ಮೋದಿ ಟೀಕೆ ಮಾಡಿದ್ದಾರೆ. ಎಲ್ಲ ಗ್ಯಾರೆಂಟಿಗಳ ಜಾರಿಗೆ ಕಾಂಗ್ರೇಸ್ ಸರ್ಕಾರ ಸಿದ್ದವಿದೆ ಎಂದರು. ಕರ್ನಾಟಕದ ಜನ ನಮಗೆ ಆಶೀರ್ವಾದ ಮಾಡಿದ್ದು, ಅವರ ವಿಶ್ವಾಸ ಉಳಿಸಿಕೊಂಡಿದ್ದೇವೆ ಎಂದು ದಿಗ್ವಿಜಯಸಿಂಗ ತಿಳಿಸಿದರು.
