ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಲಿಂಗಾಯತರನ್ನು ಕಡೆಗಣಿಸಿದ್ದರ ಪರಿಣಾಮ ಕಾಂಗ್ರೇಸ್ಸಿಗೆ ದೊಡ್ಡ ಲಾಭವಾಯಿತು ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ತಿಳಿಸಿದ್ದಾರೆ. ಬಳ್ಳಾರಿಯಲ್ಲಿ ಮಾತನಾಡಿದ ಅವರು ಆರ್ ಎಸ್ ಎಸ್ ಒಳಸಂಚಿನ ವಿರುದ್ಧ ಕೆಂಡಕಾರಿದರು. ರಾಜ್ಯ ಬಿಜೆಪಿ ಯಾರ ಹಿಡಿತದಲ್ಲಿದೆ ಅನ್ನೋದು ಎಲ್ಲರಿಗೂ ಗೊತ್ತಿರುವ ಸಂಗತಿ ಎಂದ ಶೆಟ್ಟರ, ನನ್ನ ಬಾಯಿಯಿಂದ ಮತ್ತೆ ಹೇಳಿಸಬೇಡಿ ಎಂದು ತಿಳಿಸಿದರು. ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಬಗ್ಗೆ ಯಾವದೇ ತೀರ್ಮಾನ ಕಾಂಗ್ರೇಸ್ ಪಕ್ಷದಲ್ಲಿ ಆಗಿಲ್ಲ ಎಂದು ಸ್ಪಷ್ಟಪಡಿಸಿದರು. ನಾನು ನನ್ನ ಜೀವನದಲ್ಲಿ ಎಂದಿಗೂ ಲಾಭಿ ಮಾಡಿಲ್ಲ ಎಂದರು. ಬಣಜಿಗ ಸಮಾಜಕ್ಕೆ ಅನ್ಯಾಯ ಮಾಡಿದರೆ ಸುಮ್ಮನಿರಲ್ಲ ಅನ್ನೋದಕ್ಕೆ ಮೊನ್ನೆ ಬಂದ ಫಲಿತಾಂಶ ಸಾಕ್ಷಿಯಾಗಿದೆ. ಜಗದೀಶ ಶೆಟ್ಟರ ಒಂಟಿಯಲ್ಲ ಅವರ ಜೊತೆ ಸಮಾಜ ಇದೆ ಅನ್ನೋದನ್ನ ತೋರಿಸಿಕೊಟ್ಟಿದ್ದಾರೆ ಎಂದು ಶೆಟ್ಟರ ತಿಳಿಸಿದರು.
