ಹಾವೇರಿ ಜಿಲ್ಲೆ ರಾಣೇಬೆನ್ನೂರ ತಾಲೂಕಿನ ಚೌಡಯ್ಯದಾನಪುರ ಗ್ರಾಮದ ಪುಷ್ಪವತಿ ಹೊನ್ನತ್ತಿ ಎಂಬ ಮಹಿಳೆ ಎಲ್ಲರ ಗಮನ ಸೆಳೆದಿದ್ದಾಳೆ. ದೆಹಲಿಯ ಕೆಂಪುಕೋಟೆಯಲ್ಲಿ ನಡೆಯಲಿರುವ ಸ್ವಾತಂತ್ರೋತ್ಸವ ಕಾರ್ಯಕ್ರಮಕ್ಕೆ ಪುಷ್ಪವತಿಯನ್ನು ಆಹ್ವಾನಿಸಲಾಗಿದೆ.
ಜಲಜೀವನ ಮಿಷನ್ ಯೋಜನೆಯಡಿ ” ಹರ ಘರ್ ಜಲ್ ” ಕಾರ್ಯವನ್ನು ಉತ್ತಮ ರೀತಿಯಲ್ಲಿ ಪುಷ್ಪವತಿ ನಿರ್ವಹಿಸಿದ್ದಾಳೆ. ಪತಿಯನ್ನು ಕಳೆದುಕೊಂಡ ಮೇಲೆ ಪುಷ್ಪವತಿ ಜೀವನ ನಿರ್ವಹಣೆಗೆ ನೀರುಗಂಟಿಯಾಗಿ ಕೆಲಸ ಮಾಡುತ್ತಿದ್ದಾಳೆ.
