ಬೆಂಗಳೂರು : ಜಗದೀಶ್ ಶೆಟ್ಟರ್ ವಿರುದ್ಧ ಮಾಜಿ ಸಚಿವ ಆರ್ ಅಶೋಕ್ ಬೆಂಗಳೂರಲ್ಲಿ ತೀವ್ರ ವ್ಯಂಗ್ಯಭರಿತ ವಾಗ್ದಾಳಿ ನಡೆಸಿದ್ದಾರೆ.
ಬಾಳೆ ಎಲೆ ಹಾಕೋ ಟೈಮಿಗೆ ಹಾಜರಾಗೋದು ಶೆಟ್ಟರ್ ಶೈಲಿ. ನಮ್ಮಲ್ಲೀಗ ಬಾಳೆ ಎಲೆ ರೆಡಿ ಇಲ್ಲ. ಕಾಂಗ್ರೆಸ್ಸಲ್ಲೀಗ ಬಾಳೆ ಎಲೆ ಹಾಕಿರೋದ್ರಿಂದ ಅಲ್ಲಿಗೆ ಹೋಗಿದ್ದಾರೆ ಎಂದು ವ್ಯಂಗ್ಯವಾಡುತ್ತಾ ಈದ್ಗಾ ಮೈದಾನ ಹೋರಾಟದ ದಿನಗಳನ್ನು ಆರ್. ಅಶೋಕ್ ಮೆಲಕು ಹಾಕಿದರು.
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಧ್ವಜಾರೋಹಣ ಹೋರಾಟದ ವೇಳೆ ನಾನು ಯಡಿಯೂರಪ್ಪ, ನನ್ನ ಸಹೋದರ ರವಿ ಹೋಗಿದ್ವಿ. ರಾತ್ರಿ ಯಾವುದೊ ತೋಟದಲ್ಲಿ ಮಲಗಿದ್ವಿ. ಆಗ ಆ ಹೋರಾಟದಲ್ಲಿ ಜಗದೀಶ್ ಶೆಟ್ಟರ್ ಎಲ್ಲೂ ಕಾಣಿಸಲಿಲ್ಲ. ಬಿ.ಬಿ ಶಿವಪ್ಪ ವಿಪಕ್ಷ ನಾಯಕ ಆಗುವ ಕಾಲಕ್ಕೆ ಸರಿಯಾಗಿ ಶೆಟ್ಟರ್ ಬಂದರು. ಅವರ ಹೆಸರೇ ಇರಲಿಲ್ಲ.
ಜಗದೀಶ್ ಶೆಟ್ಟರ್ ಅವರು ಎಲ್ಲಾ ಸಿದ್ಧವಾದ ಮೇಲೆ ಊಟದ ಸಮಯಕ್ಕೆ ಬರುತ್ತಾರೆ. ಅಲ್ಲಿ ಯಾರ ಎಲೆ ಇವರ ಪಾಲಾಗುತ್ತೋ ಎಂದು ಕುಹಕವಾಡಿದರು ಆರ್. ಅಶೋಕ್.
