ಕಲಬುರಗಿ :- ಗ್ಯಾರೆಂಟಿ ಯೋಜನೆಗಳೇ ಕಾಂಗ್ರೆಸ್ ಅನ್ನು ಮುಳುಗಿಸುತ್ತೇ ಎನ್ನುವ ಬಿಜೆಪಿಯ ಸಿಟಿ ರವಿ ಹೇಳಿಕೆಗೆ ಕಲಬುರಗಿಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಭಾರೀ ತಿರುಗೇಟಿನ ಜೊತೆಗೆ ಸವಾಲು ಹಾಕಿದ್ದಾರೆ.
ಇನ್ನು ಆರು ತಿಂಗಳಲ್ಲಿ ಕರ್ನಾಟಕದಲ್ಲಿ ಬಿಜೆಪಿಯೇ ಉಳಿಯಲ್ಲ. ಹೇಗೆ ಅನ್ನೋದನ್ನ ನೋಡ್ತಾ ಇರಿ. ರಾಜಕೀಯ ಮಾಡಲು ಅವರೊಬ್ಬರಿಗೆ ಬರುತ್ತಾ ? ನಮಗೆ ಬರಲ್ವಾ ? ಸುಮ್ಮನೇ 140 ವರ್ಷ ಸರಕಾರ ನಡೆಸಿದ್ದಿವಾ ? ನಮ್ಮ ಜೊತೆ ಎಷ್ಟು ಜನ ಸಂಪರ್ಕದಲ್ಲಿದ್ದಾರೆ ಅನ್ನೋದಕ್ಕಿಂತ ಅವರಲ್ಲಿ ಎಷ್ಟು ಜನ ಅಸಮಾಧಾನಿತರಿದ್ದಾರೆ ಅವರನ್ನೇ ಕೇಳಿ ಎಂದು ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ.
ಡಿಕೆಶಿ ಅಜ್ಹಯ್ಯನ ಮೇಲೆ ಆಣೆ ಮಾಡಲಿ ಎನ್ನುವುದಕ್ಕೆ ಪ್ರತಿಕ್ರಿಯಿಸಿದ ಪ್ರಿಯಾಂಕ್, ಅಜ್ಜಯ್ಯನ ಮೇಲೆ ಏಕೆ ಆಣೆ ಮಾಡಬೇಕು ? ಬಿಜೆಪಿಯವರು ದೇವರನ್ನೂ ಬಿಟ್ಟಿಲ್ಲ. ಈ ವಿಚಾರದಲ್ಲಿ ದೇವರೇಕೆ ಬೇಕು ? ದಾಖಲೆ ಮುಂದಿಡಿ ನ್ಯಾಯಾಲಯಕ್ಕೆ ಹೋಗೋಣ. ನಾವು ದಾಖಲೆ ಕೊಟ್ಟಿಲ್ಲವಾ ? ಮಠ, ದೇವಸ್ಥಾನ ಬೇಡ, ನ್ಯಾಯಾಲಯಕ್ಕೆ ಹೋಗೋಣ ಬನ್ನಿ ಎಂದು ಸಿಟಿ ರವಿಗೆ ಪ್ರಿಯಾಂಕ್ ಸವಾಲು ಹಾಕಿದ್ದಾರೆ.
