ಕರ್ನಾಟಕದಲ್ಲಿ ಇವರೆಗೆ 45 ಸಾವಿರ ಮಹಿಳೆಯರು ಕಾಣೆಯಾಗಿದ್ದಾರೆ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ ಮುತಾಲಿಕ ಗಂಭೀರ ಆರೋಪ ಮಾಡಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಮುತಾಲಿಕ್, 45 ಸಾವಿರ ಅಪ್ರಾಪ್ತ ಮಕ್ಕಳು ಗರ್ಭಿಣಿಯಾಗಿರೋದು ವರದಿಯಾಗಿದೆ ಇದು ಭಯಾನಕ ಹಾಗೂ ಆತಂಕಕಾರಿಯಾಗಿದೆ ಎಂದು ತಿಳಿಸಿದ್ದಾರೆ. ಇದರಲ್ಲಿ ಲವ್ ಜಿಹಾದ್ ಆದ ಘಟನೆಗಳು ಸೇರಿವೆ ಎಂದರು. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದರು. ಸರ್ಕಾರ ಕೂಡಲೇ ಪ್ರತ್ತೈಕ ಮಹಿಳಾ ಪಡೆ ರಚನೆ ಮಾಡಬೇಕು ಎಂದು ಆಗ್ರಹಿಸಿದರು. ಪಕ್ಷಾತೀತವಾಗಿ ರಾಜಕಾರಣಿಗಳು, ಪೊಲೀಸರು ಪಾಪಿಸ್ಟರು ಎಂದು ಆಕ್ರೋಶ ವ್ಯಕ್ತಪಡಿಸಿದರು.
