ಪ್ರತಿಷ್ಟಿತ ಕಿಂಗ್ ಫಿಷರ್ ಬಿಯರ್ ನಲ್ಲಿ ಅಪಾಯಕಾರಿ ಅಂಶ ಪತ್ತೆಯಾಗಿದ್ದರ ಬಗ್ಗೆ ಮೈಸೂರು ಅಬಕಾರಿ ಠಾಣೆಯಲ್ಲಿ ಪ್ರಕರಣ ಧಾಖಲಾಗಿದೆ ಎನ್ನಲಾಗಿದೆ. ಕಿಂಗ್ ಫಿಷರ್ ಸ್ಟ್ರಾಂಗ್ ಹಾಗೂ ಕಿಂಗ್ ಫಿಷರ್ ಅಲ್ಟ್ರಾ ಬಿಯರ್ ನಂಜನಗೂಡಿನ ಯುನೈಟೆಡ್ ಬ್ರಿವರಿಸ್ ನಲ್ಲಿ 15-07-2023 ರಲ್ಲಿ ತಯಾರಿಸಲಾದ 7 ಇ ಮತ್ತು 7 ಸಿ ನಮೂನೆಯ ಬಾಟಲಿಂಗ್ ನಲ್ಲಿ ಸೆಡಿಮೆಂಟ್ ಎಂಬ ಅಪಾಯಕಾರಿ ಅಂಶ ಪತ್ತೆಯಾಗಿದೆ ಎಂದು ವರದಿ ಬಂದಿದೆ ಎನ್ನಲಾಗಿದೆ. ಈ ಅವಧಿಯಲ್ಲಿ ತಯಾರಿಸಲಾದ 78678 ಬಿಯರ್ ಬಾಕ್ಸ್ ಸರಬರಾಜಾಗಿತ್ತು.
ವರದಿ ಬರುತ್ತಿದ್ದಂತೆ ಮಾರಾಟದ ಮೇಲೆ ನಿಷೇಧ ಹೇರಲಾಗಿದ್ದು 29 ಕೋಟಿ ಮೌಲ್ಯದ ಬಿಯರ್ ವಶಪಡಿಸಿಕೊಂಡು ತಯಾರಿಕಾ ಕಂಪನಿ ಮೇಲೆ ಕೇಸ್ ಹಾಕಲಾಗಿದೆ.
