ಪಕ್ಷಕ್ಕೆ ಕರೆದುಕೊಳ್ಳಲು ಶುರು ಮಾಡಿದರೆ, ಬಿಜೆಪಿ ಮತ್ತು ಜೆಡಿಎಸ್ ನಲ್ಲಿ ಯಾರು ಇರಲ್ಲ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಹೇಳಿಕೆ ನೀಡಿದ್ದಾರೆ. ನಮಗೆ ಆಪರೇಷನ್ ಮಾಡುವ ಅವಶ್ಯಕತೆ ಇಲ್ಲ ಎಂದ ತಂಗಡಗಿ, ಕಾಂಗ್ರೇಸ್ ತತ್ವ ಸಿದ್ದಾಂತ ಒಪ್ಪಿ ಬರುವವರಿದ್ದರೆ ಬರಲಿ ಎಂದರು. ಎನ್ ಇ ಪಿ ರದ್ಧತಿ ಬಗ್ಗೆ ಸರ್ಕಾರ ಸರಿಯಾದ ನಿರ್ಧಾರ ತೆಗೆದುಕೊಂಡಿದೆ ಎಂದು ತಂಗಡಗಿ ತಿಳಿಸಿದರು.
