ದೇಶದ ಅತ್ಯಂತ ಹಿರಿಯ ಸಾಕಾನೆ ಎಂದೇ ಹೆಸರಾಗಿದ್ದ ಬಿಜುಲಿ ಪ್ರಸಾದ ವಯೋ ಸಹಜ ಕಾಯಿಲೆಯಿಂದ ಮೃತಪಟ್ಟಿದೆ. ಮೂಲಗಳ ಪ್ರಕಾರ ಬ್ರಿಟಿಷ್ ವಸಾಹತು ಶಾಹಿಯ ಸಾಕ್ಷಿಯನ್ನು ಹೊತ್ತ ಆನೆಯು ಅಸ್ಸಾಂನ ಬಿಹಾಲಿ ಟೀ ಎಸ್ಟೇಟ್ ನಲ್ಲಿತ್ತು. ಬಿಜುಲಿ ಪ್ರಸಾದ ಒಂದು ಕಾಲದಲ್ಲಿ ಬ್ರಿಟಿಷರ ರಾಜ ಅತಿಥಿಯಾಗಿತ್ತು. 82 ವರ್ಷಗಳ ಹಿಂದೆ ವಿಲಿಯಮ್ಸನ್ ಮೇಗಾರ ಟೀ ಕಂಪನಿಯು ಈ ಆನೆಯನ್ನು ಖರೀದಿಸಿತ್ತು. ಬಿಜುಲಿ ಪ್ರಸಾದ ನಿಧನಕ್ಕೆ ನಿಸರ್ಗ ಪ್ರೇಮಿಗಳು ಸಂತಾಪ ಸೂಚಿಸಿದ್ದಾರೆ. ಭಾರತದ ಅತ್ಯಂತ ಹಳೆಯ ಆನೆ ಕಾಜಿರಂಗದಲ್ಲಿ ಎರಡನೇ ಆನೆ ಮಹಿಸೂರನಲ್ಲಿತ್ತು. ಇವೆರಡು ಆನೆಗಳು ಸಾವನ್ನಪ್ಪಿದ ಬಳಿಕ ಬಿಜುಲಿ ಪ್ರಸಾದ ಆನೆ ದೇಶದ ಅತ್ಯಂತ ಹಿರಿಯ ಆನೆಯಾಗಿತ್ತು. ಬ್ರಿಟಿಷರು ಈ ಆನೆಗೆ ಬಿಜುಲಿ ಪ್ರಸಾದ ಅಂತ ನಾಮಕರಣ ಮಾಡಿದ್ದರು.
