ಮಹಿಳೆಯೋರ್ವಳ ಮೇಲೆ ಮಾರಣಾಂತಿಕ ದಾಳಿ ನಡೆಸಿ ಕೊಲೆ ಮಾಡಲು ಯತ್ನಿಸಿದಾಗ ಪಕ್ಕದಲ್ಲಿದ್ದ ವ್ಯಕ್ತಿಯೊಬ್ಬ ಕೊಲೆ ತಪ್ಪಿಸಿದ ಘಟನೆ ಕಲಘಟಗಿಯಲ್ಲಿ ನಡೆದಿದೆ. ಅಗಷ್ಟ 18 ರಂದು ಕಲಘಟಗಿ ಪಟ್ಟಣದಲ್ಲಿ ವ್ಯಕ್ತಿಯೋರ್ವ ಹರಿತ ಆಯುಧದಿಂದ ಕೊಲೆ ಮಾಡಲು ಯತ್ನಿಸಿದ್ದ. ಅಲ್ಲಿಯೇ ಪಕ್ಕದಲ್ಲಿದ್ದ ರುಸ್ತುಂಅಲಿ ಮಿಠಾಯಿಗಾರ ಎಂಬಾತ, ಮಹಿಳೆಯ ರಕ್ಷಣೆಗೆ ಧಾವಿಸಿ ಆಕೆಯನ್ನು ರಕ್ಷಿಸಿದ್ದ. ಈ ಸಂದರ್ಭದಲ್ಲಿ ರುಸ್ತುಂಅಲಿ ಕೈಗೆ ತಲವಾರ ಏಟು ಬಿದ್ದು ಗಾಯವಾಗಿತ್ತು. ಕೈಗೆ ಗಾಯವಾದರು ಸಹ ರುಸ್ತುಂಅಲಿ ಮಹಿಳೆಯ ಕೊಲೆ ತಪ್ಪಿಸಿದ್ದಾನೆ. ರುಸ್ತುಂಅಲಿಯ ಸಾಹಸ ಮತ್ತು ಧೈರ್ಯಕ್ಕೆ ಧಾರವಾಡ ಜಿಲ್ಲಾ ಪೊಲೀಸ ವರಿಷ್ಟಾಧಿಕಾರಿ ಲೋಕೇಶ್ ಜಗಲಾಸಪೂರ ಅಭಿನಂದಿಸಿದ್ದಾರೆ. ಇದೇ ವೇಳೆ ಈ ಕಾರ್ಯವನ್ನು ಶ್ಲಾಷಿಸಿ, ರುಸ್ತುಂಅಲಿಗೆ ಪ್ರಶಂಸನಾ ಪತ್ರ ಕೊಟ್ಟಿದ್ದಾರೆ.
