ಬಿಜೆಪಿ ತೊರೆಯುವದಾಗಿ ವದಂತಿ ಹಬ್ಬಿದ್ದು, ಪಕ್ಷ ತೊರೆಯುವ ಪ್ರಶ್ನೆಯೆ ಇಲ್ಲ ಎಂದು ಕೊಪ್ಪಳ ಸಂಸದ ಸಂಗಣ್ಣ ಕರಡಿ ಸ್ಪಷ್ಟಪಡಿಸಿದ್ದಾರೆ. ಬೇಕಾದರೆ ರಕ್ತದಲ್ಲಿ ಬರೆದು ಕೊಡ್ತೀನಿ, ಪಕ್ಷ ಬಿಡಲ್ಲ ಎಂದಿದ್ದಾರೆ. ಈ ಬಾರಿಯೂ ಕೊಪ್ಪಳದಿಂದ ಲೋಕಸಭೆಗೆ ಸ್ಪರ್ಧೆ ಮಾಡುವದಾಗಿ ತಿಳಿಸಿದ ಅವರು, ಪಕ್ಷ ಟಿಕೇಟ್ ಕೊಡದೆ ಹೋದರು, ಪಕ್ಷ ಸೂಚಿಸಿದ ಅಭ್ಯರ್ಥಿ ಪರ ದುಡಿಯುವದಾಗಿ ಸಂಗಣ್ಣ ಕರಡಿ ತಿಳಿಸಿದ್ದಾರೆ.
