ಪ್ರಕೃತಿ ವಿಕೋಪದಿಂದ ತತ್ತರಿಸಿರುವ ಹಿಮಾಚಲ ಪ್ರದೇಶಕ್ಕೆ ಕರ್ನಾಟಕದ ಹೃದಯ ಮಿಡಿದಿದೆ. ಸಂಕಷ್ಟದ ಸ್ಥಿತಿಯಲ್ಲಿರುವ ಹಿಮಾಚಲಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ 15 ಕೋಟಿ ನೆರವು ನೀಡಿದ್ದಾರೆ. ಪ್ರಕೃತಿ ವಿಕೋಪದಿಂದಾಗಿ ಅಲ್ಲಿನ ಜನ ಎಲ್ಲವನ್ನು ಕಳೆದುಕೊಂಡು ಬೀದಿಗೆ ಬಿದ್ದಿದ್ದು, ಕರ್ನಾಟಕ ಸಹಾಯ ಹಸ್ತ ಚಾಚಿದೆ. ರಾಜ್ಯ ಸರ್ಕಾರದ ಪರವಾಗಿ 15 ಕೋಟಿ ನೆರವು ನೀಡುವ ಮೂಲಕ ಕರ್ನಾಟಕ ಮಾನವೀಯತೆ ಮೆರೆದಿದೆ.
