ಕುಂದಗೋಳ, ಹುಬ್ಬಳ್ಳಿ ಹಾಗೂ ನವಲಗುಂದ ತಾಲೂಕಿನ 35 ಹಳ್ಳಿಗಳ ಕೆರೆಗಳಿಗೆ ನೀರು ಬಿಡಲು ಆದೇಶ ಮಾಡಲಾಗಿದ್ದು, ಕಾಲುವೆಯ ಎರಡು ಬದಿಗಳಲ್ಲಿ ನೂರು ಮೀಟರ ವ್ಯಾಪ್ತಿಯಲ್ಲಿ ಕಲಂ 144 ರ ಅನ್ವಯ ನಿಷೇದಾಜ್ಞೆ ಜಾರಿ ಮಾಡಲಾಗಿದೆ. ಕುಡಿಯುವ ಉದ್ದೇಶಕ್ಕೆ ಮಲಪ್ರಭಾ ಕಾಲುವೆಯಿಂದ ಇಂದಿನಿಂದ 15 ದಿನಗಳ ವರೆಗೆ ಪ್ರತಿ ದಿನ 700 ಕ್ಯೂಸೆಕ್ಸ್ ನಂತೆ ಒಟ್ಟು 0.907 ಟಿ ಎಮ್ ಸಿ ನೀರನ್ನು ಬಿಡಲು ಪ್ರಾದೇಶಿಕ ಆಯುಕ್ತರು ಆದೇಶ ಹೊರಡಿಸಿದ್ದಾರೆ. 22-08-2023 ರಿಂದ 15 ದಿನಗಳ ಕಾಲ ನಿಷೇದಾಜ್ಞೆ ಜಾರಿ ಮಾಡಲಾಗಿದ್ದು, ಜಮೀನುಗಳಿಗೆ ನೀರು ಹರಿಸದಂತೆ ಮತ್ತು ಕುಡಿಯುವ ಉದ್ದೇಶಕ್ಕೆ ಮಾತ್ರ ಬಳಸಿಕೊಳ್ಳುವಂತೆ ಆದೇಶ ಮಾಡಲಾಗಿದೆ. ಹುಬ್ಬಳ್ಳಿ ತಾಲೂಕಿನ 7 ಹಳ್ಳಿ, ಕುಂದಗೋಳ ತಾಲೂಕಿನ 13 ಮತ್ತು ನವಲಗುಂದ ತಾಲೂಕಿನ 15 ಗ್ರಾಮಗಳ ಕಾಲುವೆ ಹರಿಯುವ ಪ್ರದೇಶದಲ್ಲಿ ಈ ನಿಷೇದಾಜ್ಞೆ ಜಾರಿಯಲ್ಲಿರುತ್ತದೆ ಎಂದು ಧಾರವಾಡ ಜಿಲ್ಲಾಧಿಕಾರಿ ಗುರುದತ್ ಹೆಗಡೆ ನಿಷೇದಾಜ್ಞೆ ವಿಧಿಸಿ ಆದೇಶ ಹೊರಡಿಸಿದ್ದಾರೆ.
