ಇಡೀ ವಿಶ್ವದ ಚಿತ್ತ ಭಾರತದತ್ತ ನೆಟ್ಟಿದೆ. ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ಕೊಟ್ಯಂತರ ಜನ ಕುತೂಹಲದಿಂದ ಕಾಯುತ್ತಿದ್ದಾರೆ. ಚಂದ್ರಯಾನ 3 ಯಶಸ್ವಿಗೆ ದೇಶದ ಉದ್ದಗಲಕ್ಕೂ ಪ್ರಾರ್ಥನೆಗಳು ಮೊಳಗಿವೆ. ಮಂದಿರ, ಮಸೀದಿ, ದೇವಸ್ಥಾನ, ಚರ್ಚಗಳಲ್ಲಿ ಪ್ರಾರ್ಥನೆ ನಡೆದಿವೆ. ಹುಬ್ಬಳ್ಳಿಯ ಸಿದ್ದಾರೋಡ ಮಠದಲ್ಲಿ ಹುಬ್ಬಳ್ಳಿ ಜನ ರುದ್ರಾಭಿಷೇಕ ನಡೆಸಿದರು. ಇಸ್ರೋ ವಿಜ್ಞಾನಿಗಳ ಪರಿಶ್ರಮ ಸಫಲವಾಗಲಿ ಎಂದು ಹಾರೈಸಿದರು.
