ಅನೇಕ ಬಿರುದಾವಳಿಗಳಿಂದ ಕರೆಯಲ್ಪಡುವ ಧಾರವಾದ ನಿವೃತ್ತರ ಸ್ವರ್ಗವೂ ಹೌದು. ಧಾರವಾಡ ಹೆಸರು ಪ್ರಸ್ತಾಪವಾದಾಗಲೆಲ್ಲ, ಸಂಗೀತಗಾರರು, ಸಾಹಿತಿಗಳು, ಶೈಕ್ಷಣಿಕ ತಜ್ಞರು, ಹೋರಾಟಗಾರರು, ಹೀಗೆ ಪಟ್ಟಿ ಬೆಳೆಯುತ್ತ ಹೋಗುತ್ತದೆ. ಅಂತಹ ಧಾರವಾಡ ಈಗ ಉಳಿದುಕೊಂಡಿಲ್ಲ. ಕರ್ನಾಟಕ ವಿಶ್ವವಿಧ್ಯಾಲಯದ ಹಿಂದೆ ಜಮೀನು ವ್ಯಾಜ್ಯಕ್ಕಾಗಿ ನಡೆದ ಗುಂಡಿನ ಗಲಾಟೆ ಧಾರವಾಡದ ಶಾಂತಿ ಪ್ರಿಯರಲ್ಲಿ ಭಯ ಹುಟ್ಟಿಸಿದೆ.
ಸುಶಾಂತ ಅಗರವಾಲ ಹಾಗೂ ಪವನ ಕುಲಕರ್ಣಿ ನಡುವೆ 7 ಏಕರೆ ಜಮೀನಿನ ವಿಷಯವಾಗಿ ಗಲಾಟೆ ನಡೆದಿದೆ. ಇಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದು ಗುಂಡಿನ ಶಬ್ದದೊಂದಿಗೆ ಅಂತ್ಯಗೊಂಡಿದೆ. ಸುಶಾಂತ ಅಗರವಾಲ ತಮ್ಮ ರಕ್ಷಣೆಗಾಗಿ ತಮ್ಮಲ್ಲಿದ್ದ ರಿವಾಲ್ವರನಿಂದ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಗಾಳಿಯಲ್ಲಿ ಗುಂಡು ಹಾರಿದ್ದು ನಿಜ ಎಂದಿರುವ ಡಿ ಸಿ ಪಿ ರಾಜೀವ, ಇಬ್ಬರ ವಿಚಾರಣೆ ನಡೆಸಿದ್ದಾರೆ. ಈ ಘಟನೆಯಿಂದಾಗಿ ಜನ ಭಯಭೀತಗೊಂಡಿದ್ದಾರೆ.
