ಧಾರವಾಡದಲ್ಲಿ ಬೆಳ್ಳಂ ಬೆಳಿಗ್ಗೆ ಗುಂಡಿನ ಸದ್ದು ಕೇಳಿ ಬಂದಿದೆ. ಭೂ ವಿವಾದಕ್ಕೆ ಸಂಬಂಧಿಸಿದಂತೆ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಸುಸಂಸ್ಕೃತ ನಗರಿ ಧಾರವಾಡ ಕ್ರಮೇಣ ಕ್ರೈಮ್ ಸಿಟಿಯಾಗಿ ಬದಲಾಗುತ್ತಿದೆ ಅನ್ನೋದಕ್ಕೆ ಈ ಘಟನೆ ಕಾರಣವಾಗಿದೆ. ಕರ್ನಾಟಕ ವಿಶ್ವ ವಿಧ್ಯಾಲಯದ ಹಿಂದೆ ಇರುವ ಟೈವಾಕ್ ಫ್ಯಾಕ್ಟರಿ ಬಳಿ ಗುಂಡಿನ ಶಬ್ದ ಕೇಳಿ ಬಂದಿದ್ದು, ಯಾರಿಗೂ ಗಾಯವಾಗಿಲ್ಲ ಎನ್ನಲಾಗಿದೆ. ಸುಶಾಂತ ಅಗರವಾಲ ಎಂಬುವವರು ತಮ್ಮ ರಕ್ಷಣೆಗಾಗಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ ಎಂದು ತಿಳಿದು ಬಂದಿದೆ. ಇತ್ತೀಚಿಗೆ ಧಾರವಾಡದಲ್ಲಿ ಭೂ ಮಾಫಿಯಾ ಎಗ್ಗಿಲ್ಲದೇ ನಡೆಯುತ್ತಿದ್ದು, ಅಮಾಯಕರ ಭೂಮಿಯನ್ನು ಕಸಿದುಕೊಳ್ಳುವ ಯತ್ನ ನಡೆದಿದೆ. ಸ್ಥಳಕ್ಕೆ ವಿಧ್ಯಾಗಿರಿ ಪೊಲೀಸರು ದೌಡಾಯಿಸಿದ್ದು, ನಾಲ್ವರನ್ನು ವಿಚಾರಣೆಗೆ ಕರೆದೋಯ್ದಿದ್ದಾರೆ.
