ಶಿಕ್ಷಕನಿಗೆ ನಿವೃತ್ತಿ ವೇತನ ಕೊಡುವದಕ್ಕೆ ಲಂಚದ ಬೇಡಿಕೆ ಇಟ್ಟ ಧಾರವಾಡದ ಆರ್ ಎನ್ ಶೆಟ್ಟಿ ಕ್ರೀಡಾಂಗಣ ಬಳಿ ಇರುವ ಕಾಲೇಜು ಶಿಕ್ಷಣ ಇಲಾಖೆಯ ಇಬ್ಬರು ಅಧಿಕಾರಿಗಳು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಸುಬಾಸ ಜವರೆಡ್ಡಿ ಎಂಬ ನಿವೃತ್ತ ಶಿಕ್ಷಕ ನಿವೃತ್ತಿ ವೇತನ ಕೇಳಲು ಹೋದಾಗ ದುರ್ಗಾದಾಸ ಮಸೂತಿ ಮತ್ತು ನಾಗರಾಜ ಹೂಗಾರ ಎಂಬ ಅಧಿಕಾರಿಗಳು ಲಂಚ ಕೇಳಿದ್ದರು. ಇಂದು 15 ಸಾವಿರ ರೂಪಾಯಿ ಲಂಚ ಸ್ವೀಕರಿಸುವ ಸಂದರ್ಭದಲ್ಲಿ ಇಬ್ಬರು ಲೋಕಾಯುಕ್ತರ ಕೈಗೆ ಸಿಕ್ಕು ಬಿದ್ದಿದ್ದಾರೆ.ಲೋಕಾಯುಕ್ತ ಎಸ್ ಪಿ,ಸತೀಶ ಚಿಟಗುಪ್ಪಿ ನೇತೃತ್ವದಲ್ಲಿ ದಾಳಿ ಮಾಡಲಾಯಿತು.
