Download Our App

Follow us

Home » ಆರೋಗ್ಯ » ಅವನಿಗೆ 70 – ಇವಳಿಗೆ 63 : ಪೊಲೀಸ್ ಠಾಣೆಗೆ ಬಂದ ಲವ್ ಸ್ಟೋರಿ…!

ಅವನಿಗೆ 70 – ಇವಳಿಗೆ 63 : ಪೊಲೀಸ್ ಠಾಣೆಗೆ ಬಂದ ಲವ್ ಸ್ಟೋರಿ…!

ಬೆಂಗಳೂರು : ಪ್ರೀತಿಗೆ ವಯಸ್ಸಿನ ಹಂಗಿಲ್ಲ, ಪ್ರೀತಿ ಹೆಸರಲ್ಲಿ‌ ಮೋಸ ಮಾಡಲು, ಮೋಸ ಹೋಗಲು ಎಳೆ ವಯಸ್ಸೇ ಆಗಬೇಕಿಲ್ಲ. 70 ರ ಅಜ್ಜ – 63 ರ ಅಜ್ಜಿಯ ಲವ್ ದೋಖಾ ಸ್ಟೋರಿ ಈಗ ಬೆಂಗಳೂರು ಪೂರ್ವ ವಲಯ ಮಹಿಳಾ ಪೊಲೀಸ್ ಠಾಣೆ ಅಂಗಳ ತಲುಪಿದೆ.

70 ರ ಅಜ್ಜ ಪ್ರೀತಿಸಿ ಮದ್ವೆಯಾಗೋದಾಗಿ ವಂಚಿಸಿದ್ದಾನೆಂದು 63ರ ಅಜ್ಜಿ ದೂರು ನೀಡಿ, ನನಗೆ ನ್ಯಾಯ ಕೊಡಿಸಿ ಎಂದು ಕೇಳಿಕೊಂಡಿರೋ ಅಪರೂಪದ ಘಟನೆ ಪೊಲೀಸರನ್ನ ಕಕ್ಕಾಬಿಕ್ಕಿ ಮಾಡಿದೆ.

ಬೆಂಗಳೂರು ಹಲಸೂರು ನಿವಾಸಿಗಳಾದ ಇಬ್ಬರೂ ಕಳೆದ ಐದು ವರ್ಷದಿಂದ ಜೊತೆಗೆ ಸುತ್ತಾಡಿದ್ದಾರೆ. 70 ವರ್ಷದ ಲೋಕನಾಥ್ ಮಗ ಡಿವೋರ್ಸ್ ಏಕಾಂಗಿಯಾಗಿದ್ದ. ಈತ‌ನಿಗೆ ಮದುವೆ ಮಾಡಿಸುವ ಸಲುವಾಗಿ ಪರಿಚಿತರಾಗಿದ್ದ ಮ್ಯಾರೇಜ್ ಬ್ರೋಕರ್ ದಯಾಮಣಿ ಸಂಪರ್ಕಿಸಿದರು. ಮಗನಿಗೆ ಹೆಣ್ಣು ಹುಡುಕುವ ಮಾತುಗಳು ಈ ವೃದ್ಧರ ನಡುವೆ ಪ್ರೀತಿ ಮೂಡಿಸಿತ್ತು. ಐದು ವರ್ಷ ಅನೇಕ ಪ್ರವಾಸಗಳನ್ನು ಜೊತೆಯಾಗಿ ನಡೆಸಿದ್ದರು.

ಇತ್ತೀಚೆಗೆ ಮಗನಿಗೆ ಒಂದು ಹುಡುಗಿ ಫಿಕ್ಸ್ ಆಯಿತು. ಅವರ ಮದುವೆ ಸಮಯದಲ್ಲೇ ನಾವಿಬ್ಬರು ಮದುವೆಯಾಗೋಣ ಅಂತ ದಯಾಮಣಿ ಪ್ರಸ್ತಾಪ ಇಟ್ಟರು. ಇದಾಗುತ್ತಿದ್ದಂತೆ ಲೋಕನಾಥ್ ಅವರು ದಯಾಮಣಿಯನ್ನು ಅವಾಯ್ಡ್ ಮಾಡ ತೊಡಗಿದರು. ನಮಗೆ ಮದುವೆ ಬೇಡ, ಮಗನಿಗಾಗಲಿ ಎನ್ನತೊಡಗಿದ ಲೋಕನಾಥ್. ಇದರಿಂದ ಮನ ನೊಂದ ದಯಾಮಣಿ ಈಗ ಮಹಿಳಾ ಪೊಲೀಸರ ಅಂಗಳದಲ್ಲಿ 70ರ ಅಜ್ಜ ಲೋಕನಾಥ್ ವಿರುದ್ಧ ದೂರು ಹಿಡಿದು ನಿಂತಿದ್ದಾರೆ. ಪೊಲೀಸರು ಏನ್ಮಾಡ್ತಾರೆ..? ಅಜ್ಜ ಹಾಗೂ ಆತನ ಮಗ ಯಾವ ನಿರ್ಧಾರಕ್ಕೆ ಬರ್ತಾರೆ ಅನ್ನೋ ಕುತೂಹಲ ಮೂಡಿದೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ರೆಡ್ಡಿ ಏನಂದಿರಿಗೀನಾ ! ರೊಚ್ಚಿಗೆದ್ದ ರಾಮುಲು. ಗಣಿ ನಾಡಿನಲ್ಲಿ ದೂಳು ಮೆತ್ತಿಕೊಂಡ ನಾಯಕರು

ಬಳ್ಳಾರಿ ರಾಜಕೀಯ, ಒಂದು ಕಾಲಕ್ಕೆ ರಾಜ್ಯದ ರಾಜಕಾರಣವನ್ನು ತನ್ನತ್ತ ಸೆಳೆದಿತ್ತು. ಜನಾರ್ಧನ ರೆಡ್ಡಿ ಮತ್ತು ಶ್ರೀರಾಮುಲು ಜೋಡಿ, ಬಳ್ಳಾರಿಯನ್ನು ಬಿಜೆಪಿಯ ಭದ್ರಕೋಟೆಯನ್ನಾಗಿ ಮಾಡಿದ್ದರು. ಆದರೆ ಈಗ ಬಳ್ಳಾರಿಯಲ್ಲಿ

Live Cricket

error: Content is protected !!