ಉತ್ತರಕನ್ನಡ ಜಿಲ್ಲೆಯ ಅಂಕೋಲ್ಲಾ ತಾಲೂಕಿನಲ್ಲಿ ಸೆಲ್ಫಿ ತೆಗೆದುಕೊಳ್ಳಲು ಹೋಗಿದ್ದ ಯುವತಿ ಬ್ರಹತ್ ಗಾತ್ರದ ಮೊಸಳೆಯಿಂದ ಸ್ವಲ್ಪದರಲ್ಲಿಯೇ ತಪ್ಪಿಸಿಕೊಂಡ ಘಟನೆ ನಡೆದಿದೆ. ಧಾರವಾಡದ ದೊಡ್ಡಮನಿ ಕುಟುಂಬದ ಸದಸ್ಯರು ಪ್ರವಾಸಕ್ಕಾಗಿ ವಿಭೂತಿ ಫಾಲ್ಸ್ ಹಾಗೂ ಗೋಕರ್ಣಕ್ಕೆ ಹೊರಟಿದ್ದರು. ವಿಭೂತಿ ಫಾಲ್ಸ್ ಕಡೆಗೆ ಹೋಗುವಾಗ ಪ್ರಕೃತಿಯ ಸೊಬಗನ್ನು ಸೆರೆ ಹಿಡಿಯಲು ಯುವತಿ ವಾಹನದಿಂದ ಕೆಳಗೆ ಇಳಿದಿದ್ದಾಳೆ. ಇನ್ನೇನು ನದಿಯ ವಿಹಂಗಮ ನೋಟದ ಸೆಲ್ಫಿ ತೆಗೆಯಬೇಕು ಎಂದು ಹೋಗಿದ್ದಾಳೆ. ಪಕ್ಕದಲ್ಲಿಯೇ ಬೃಹತ ಗಾತ್ರದ ಮೊಸಳೆ ನೋಡಿ ಆ ಯುವತಿ ಮೂರ್ಛೆ ಹೋದ ಘಟನೆ ನಡೆದಿದೆ. ಅಲ್ಲಿಯೇ ಪಕ್ಕದಲ್ಲಿದ್ದ ಸಂಬಂಧಿಕರು ಯುವತಿಯನ್ನು ರಕ್ಷಿಸಿದ್ದಾರೆ.
