Download Our App

Follow us

Home » ಭಾರತ » ಕಾಂಗ್ರೇಸ್ಸಿಗೆ ಹೋಗಲ್ಲ. ಅವರಿಗೆ ಅವಶ್ಯಕತೆಯೂ ಇಲ್ಲ. ರೇಣುಕಾಚಾರ್ಯ ಹೇಳಿಕೆ

ಕಾಂಗ್ರೇಸ್ಸಿಗೆ ಹೋಗಲ್ಲ. ಅವರಿಗೆ ಅವಶ್ಯಕತೆಯೂ ಇಲ್ಲ. ರೇಣುಕಾಚಾರ್ಯ ಹೇಳಿಕೆ

ಬಿಜೆಪಿಯ ಫೈರ್ ಬ್ರಾಂಡ್, ಮಾಜಿ ಶಾಸಕ ಹೊನ್ನಾಳಿಯ ರೇಣುಕಾಚಾರ್ಯ ಕಾಂಗ್ರೇಸ್ಸಿಗೆ ಹೋಗಲ್ಲ, ಅವರಿಗೆ ಅವಶ್ಯಕತೆಯೂ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಪಕ್ಷದ ಪ್ರಭಲ ಆಕಾಂಕ್ಷಿಯಾಗಿದ್ದೇನೆ ಎಂದಿದ್ದಾರೆ. ಕ್ಷೇತ್ರದ ಸಮಸ್ಯೆ ಹೇಳಲು ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ್ದೇನೆ ಎಂದ ರೇಣುಕಾಚಾರ್ಯ ನ್ಯಾಮತಿ ಹಾಗೂ ಹೊನ್ನಾಳಿ ತಾಲೂಕನ್ನು ಬರಗಾಲ ಪೀಡಿತ ತಾಲೂಕುಗಳು ಎಂದು ಘೋಷಿಸುವಂತೆ ಮನವಿ ಮಾಡಿದ್ದೇನೆ ಎಂದು ಹೇಳಿದರು. ಹೊನ್ನಾಳಿ ಕ್ಷೇತ್ರದ ಜನ ನನ್ನನ್ನು ಮೂರು ಬಾರಿ ಶಾಸಕನಾಗಿ ಆಯ್ಕೆ ಮಾಡಿದ್ದಾರೆ. ಮಾಜಿ ಶಾಸಕನಾಗಿದ್ದರು ಸಹ ನನ್ನ ಕರ್ತವ್ಯ ನಿರ್ವಹಿಸಿದ್ದೇನೆ. ಬಿಜೆಪಿ ಮುಖಂಡರ ಹತ್ತಿರ ಲೋಕಸಭಾ ಟಿಕೇಟ್ ಕೇಳಿದ್ದೇನೆ ಎಂದು ರೇಣುಕಾಚಾರ್ಯ ತಿಳಿಸಿದ್ದಾರೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಗಮನ ಸೆಳೆದ ಸೌಥ್ ಇಂಡಿಯಾ ಮೀಡಿಯಾ ಅವಾರ್ಡ್

TNIT ಮೀಡಿಯಾ ನಿನ್ನೆ ಸುದ್ದಿಗೋಷ್ಟಿ ನಡೆಸಿ, TNIT ಸೌಥ್ ಇಂಡಿಯಾ ಮೀಡಿಯಾ ಅವಾರ್ಡ್ ಕಾರ್ಯಕ್ರಮದ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದೆ.   ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಗಣೇಶ ಕಾಸರಗೋಡು ಅವರು

Live Cricket

error: Content is protected !!