ಹುಬ್ಬಳ್ಳಿ ಧಾರವಾಡ ನಡುವೆ ಓಡಾಡುವ ಚಿಗರಿ ಬಸ್ ಒಂದಿಲ್ಲೊಂದು ಘಟನೆಗೆ ಸಾಕ್ಷಿಯಾಗುತ್ತಿದೆ. ಹುಬ್ಬಳ್ಳಿಯ ರೇಲ್ವೇ ನಿಲ್ದಾಣದ ಬಳಿ ಚಿಗರಿ ಬಸ್ ವ್ಯಕ್ತಿಯೊಬ್ಬನ ಮೇಲೆ ಹಾಯ್ದ ಪರಿಣಾಮ ವೃದ್ಧನ ಬಲಗಾಲಿನ ಚರ್ಮ ಕಿತ್ತು ಬಂದಿದೆ. ಬಿ ಆರ್ ಟಿ ಎಸ್ ಬಸ್. ಆರಂಭಗೊಂಡ ಮೇಲೆ ಸಾವು ನೋವುಗಳು ಜಾಸ್ತಿಯಾಗುತ್ತಿವೆ. ವೇಗದ ಓಟಕ್ಕೆ ಹೆಸರಾಗಿರುವ ಚಿಗರಿ ಬಸ್ಸುಗಳು ನಿಯಂತ್ರಣಕ್ಕೆ ಬರುವಷ್ಟರಲ್ಲಿ ದುರ್ಘಟನೆಗೆ ಕಾರಣವಾಗುತ್ತಿವೆ. ಗಾಯಗೊಂಡ ವೃದ್ಧನನ್ನು ಸ್ಥಳೀಯರ ಸಹಾಯದಿಂದ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.
