ರಾಜ್ಯದಲ್ಲಿ ಬಿಜೆಪಿ ಶೋಚನೀಯ ಪರಿಸ್ಥಿತಿ ತಲುಪಿದೆ. ಆ ಪಕ್ಷದ ಉಸಾಬರಿ ನಮಗ್ಯಾಕೆ ಅಂತ ಜಗದೀಶ ಶೆಟ್ಟರ ಹೇಳಿದ್ದಾರೆ. ಉಡುಪಿ ಪ್ರವಾಸದಲ್ಲಿರುವ ಅವರು 65 ಸ್ಥಾನಕ್ಕೆ ಇಳಿದಿರುವ ಬಿಜೆಪಿಯಲ್ಲಿ ಹಲವು ನಾಯಕರು ನೊಂದಿದ್ದು, ಮತ್ತಷ್ಟು ಜನ ಪಕ್ಷ ತೊರೆಯಲಿದ್ದಾರೆ ಎಂದು ಹೇಳುವ ಮೂಲಕ ಮೇಜರ್ ಸರ್ಜರಿಯ ಸಂದೇಶ ನೀಡಿದ್ದಾರೆ. ಕಾರ್ಯಕ್ರಮದ ನೆಪದಲ್ಲಿ ಜಗದೀಶ ಶೆಟ್ಟರ ಅವರು ಬೇರೆ ಬೇರೆ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡಿದ್ದು, ಭರ್ಜರಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.
