ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಟ್ಟಿರುವ ಸರ್ಕಾರ, ಸಾರಿಗೆ ಸಂಸ್ಥೆಗೆ ಮತ್ತಷ್ಟು ಶಕ್ತಿ ತುಂಬಲು ಲಾಜಿಸ್ಟಿಕ್ ಆರಂಭಕ್ಕೆ ಮುಂದಾಗಿದೆ. ಎಲ್ಲವು ಅಂದುಕೊಂಡಂತೆ ನಡೆದರೆ ಸೆಪ್ಟೆಂಬರನಿಂದ ಕೆ ಎಸ್ ಆರ್ ಟಿ ಸಿ ಲಾರಿಗಳು ರೋಡಿಗೆ ಇಳಿಯಲಿವೆ ಎಂದು ಕರ್ನಾಟಕ ಕಾಂಗ್ರೇಸ್ ತನ್ನ ಟ್ವಿಟರ್ ಅಕೌಂಟ್ ನಲ್ಲಿ ಪ್ರಕಟಿಸಿದೆ. ಈ ಸಂಬಂಧವಾಗಿ ಸಾರಿಗೆ ಇಲಾಖೆಯಾಗಲಿ, ಸಾರಿಗೆ ಮಂತ್ರಿಯಾಗಲಿ ಯಾವದೇ ಪ್ರತಿಕ್ರೀಯೆ ನೀಡಿಲ್ಲ. ಸರ್ಕಾರಿ ಸಂಸ್ಥೆಗಳನ್ನು ಲಾಭದ ಹಂತಕ್ಕೆ ಕೊಂಡೊಯ್ಯುವ ಇಚ್ಚಾಶಕ್ತಿ ನಮ್ಮ ಸರ್ಕಾರಕ್ಕಿದೆ ಎಂದು ಕಾಂಗ್ರೇಸ್ ಟ್ವಿಟರ್ ನಲ್ಲಿ ಹೇಳಿಕೊಂಡಿದೆ.
