ಉಜ್ವಲಾ ಯೋಜನೆಯಡಿ ಪಡೆದುಕೊಂಡಿರುವ ಸಿಲೆಂಡರ ಮೇಲೆ ಕೇಂದ್ರ ಸರ್ಕಾರ ಇನ್ನೂರು ರೂಪಾಯಿ ಸಬ್ಸಿಡಿ ನೀಡಲು ತೀರ್ಮಾನ ತೆಗೆದುಕೊಂಡಿದೆ. ಕೇಂದ್ರ ಸರ್ಕಾರದ ಕ್ಯಾಬಿನೆಟ್ ನಲ್ಲಿ ಈ ತೀರ್ಮಾನ ತೆಗೆದುಕೊಂಡಿದ್ದು, ಸಹೋದರಿಯರಿಗೆ ರಕ್ಷಾ ಬಂಧನದ ಗಿಫ್ಟ್ ನೀಡಿದೆ. ಕೇಂದ್ರ ಸಚಿವ ಅನುರಾಗ ಠಾಕೂರ ಈ ವಿಷಯ ತಿಳಿಸಿದ್ದು 9.6 ಕೋಟಿ ಮಹಿಳೆಯರು ಈ ಯೋಜನೆಯ ಲಾಭ ಪಡೆಯಲಿದ್ದಾರೆ ಎಂದು ತಿಳಿಸಿದರು. ಉಜ್ವಲಾ ಯೋಜನೆಯಡಿ 75 ಲಕ್ಷ ಉಚಿತ ಸಿಲೆಂಡರ್ ಸಂಪರ್ಕ ಕೊಡಲಾಗಿದೆ ಎಂದು ತಿಳಿಸಿದರು.
