ಮೈಸೂರು ದಸರಾ ಉದ್ಘಾಟನೆಗೆ ನಾದಬೃಹ್ಮ, ಪದದನಿದಾಸ ಡಾ.ಹಂಸಲೇಖ ಹೆಸರು ಘೋಷಣೆಯಾದ ಬೆನ್ನಲ್ಲೇ ಐತಿಹಾಸಿಕ ಮೈಸೂರು ದಸರಾ ಹಬ್ಬಕ್ಕೆ ಕ್ಷಣಗಣನೆ ಆರಂಭವಾಗಿದೆ. ಹುಣಸೂರಿನ ವೀರನಹೊಸಹಳ್ಳಿಯಲ್ಲಿ ಇಂದು ಗಜ ಪಯಣಕ್ಕೆ ಚಾಲನೆ ನೀಡಲಾಗಿದೆ.
ಮೈಸೂರು ಉಸ್ತುವಾರಿ ಸಚಿವ ಡಾ. ಎಚ್ ಮಹಾದೇವಪ್ಪ ಗಜಪಡೆಗೆ ಪೂಜೆ ಸಲ್ಲಿಸುವ ಮೂಲಕ ಮೈಸೂರು ದಸರಾ ಗಜ ಪಯಣಕ್ಕೆ ಚಾಲನೆ ನೀಡಿದ್ದಾರೆ. ಪೂಜಾ ಕಾರ್ಯಕ್ರಮ ನೆರವೇರಿದ ಬಳಿಕ 9 ಆನೆಗಳು ಮೈಸೂರಿನತ್ತ ಪ್ರಯಾಣ ಬೆಳೆಸಿವೆ.
ಆನೆಗಳು ಮೈಸೂರು ತಲುಪಿದ ಬಳಿಕ ಜಂಬೂ ಸವಾರಿಯ ತಾಲೀಮನಲ್ಲಿ ಭಾಗವಹಿಸಲಿವೆ.
