ಈ ಸಲದ ಗಣೇಶ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಆಚರಿಸಲು ಹುಬ್ಬಳ್ಳಿಯ ರಜತ್ ಫೌಂಡೇಶನ ಅಭಿಯಾನ ಆರಂಭಿಸಿದೆ. ಕಾಂಗ್ರೇಸ್ಸಿನ ಯುವ ಮುಖಂಡ ರಜತ್ ಉಳ್ಳಾಗಡ್ಡಿಮಠ ನೇತೃತ್ವದಲ್ಲಿ ನಡೆದಿರುವ ಅಭಿಯಾನಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಬೆಂಬಲ ಸೂಚಿಸಿದ್ದು, ಪರಿಸರ ಮಾಲಿನ್ಯ ತಡೆಗಟ್ಟಲು, ಎಲ್ಲರು ಮಣ್ಣಿನ ಗಣೇಶ ಮೂರ್ತಿಗಳನ್ನು ಪ್ರತಿಷ್ಟಾಪಿಸಬೇಕೆಂದು ಕರೆ ನೀಡಿದರು.
