Download Our App

Follow us

Home » ವಿಶ್ವ » ಸೆಪ್ಟೆಂಬರ್ 15, 2023 ರಂದು ಅಂತರಾಷ್ಟ್ರೀಯ ಪ್ರಜಾಪ್ರಭುತ್ವದ ದಿನದ” ಆಚರಣೆ. ಲಕ್ಷಾಂತರ ಮಕ್ಕಳು ಹಾಗೂ ಜನರಿಂದ ಏಕಕಾಲಕ್ಕೆ ಸಂವಿಧಾನದ ಪೀಠಿಕೆಯ ಓದು

ಸೆಪ್ಟೆಂಬರ್ 15, 2023 ರಂದು ಅಂತರಾಷ್ಟ್ರೀಯ ಪ್ರಜಾಪ್ರಭುತ್ವದ ದಿನದ” ಆಚರಣೆ. ಲಕ್ಷಾಂತರ ಮಕ್ಕಳು ಹಾಗೂ ಜನರಿಂದ ಏಕಕಾಲಕ್ಕೆ ಸಂವಿಧಾನದ ಪೀಠಿಕೆಯ ಓದು

ಸೆಪ್ಟೆಂಬರ್ 15 ರಂದು ಇತಿಹಾಸ ಸೃಷ್ಟಿಯಾಗಲಿದೆ. ವಿಶ್ವದ ಲಕ್ಷಾಂತರ ಮಕ್ಕಳು ಹಾಗೂ ಜನ ಸಂವಿಧಾನದ ಪೀಠಿಕೆ ಪಟಿಸಲಿದ್ದಾರೆ.

ಪ್ರಜಾಪ್ರಭುತ್ವದ ಆಶಯಗಳಾದ ಸಮಾನತೆ ಮತ್ತು ಸಾಮಾಜಿಕ ನ್ಯಾಯವನ್ನು ಸಾಧಿಸುವುದಕ್ಕಾಗಿ ಕರ್ನಾಟಕವು ಈಗಾಗಲೇ ಹಲವು ಜನಪರ ಕಾಯ್ದೆಗಳನ್ನೂ ಜಾರಿಗೊಳಿಸಿದೆ.

ಈ ಹಿನ್ನಲೆಯಲ್ಲಿ ಇಡೀ ಜಗತ್ತೇ ಅಂತರಾಷ್ಟ್ರೀಯ ಪ್ರಜಾಪ್ರಭುತ್ವದ ದಿನವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ ಪ್ರಜಾಪ್ರಭುತ್ವದ ಮೂಲ ಉದ್ದೇಶ ಹಾಗೂ ಅದರ ಮಹತ್ವವನ್ನು ವ್ಯಾಪಕವಾಗಿ ಹರಡಲು, ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯು ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿಗಳಾದ ಡಿ ಕೆ ಶಿವಕುಮಾರ್ ಅವರ ಮಾರ್ಗದರ್ಶನದಲ್ಲಿ, ಮಾನ್ಯ ಸಮಾಜ ಕಲ್ಯಾಣ ಸಚಿವರಾದ ಡಾ ಹೆಚ್ ಸಿ ಮಹದೇವಪ್ಪನವರ ಸಾರಥ್ಯದಲ್ಲಿ ಮುಂಬರುವ ಪೀಳಿಗೆಗೆ ಪ್ರಜಾಪ್ರಭುತ್ವದ ಮೌಲ್ಯ ಹಾಗೂ ಅದರ ಆಶಯಗಳ ಅರ್ಥವನ್ನು ಪರಿಣಾಮಕಾರಿಯಾಗಿ ದಾಟಿಸಲು ಉದ್ದೇಶಿಸಿದೆ.

ಅಂತರಾಷ್ಟ್ರೀಯ ಪ್ರಜಾಪ್ರಭುತ್ವದ ದಿನದಂದು, ಇಡೀ ದೇಶವನ್ನು ಒಗ್ಗೂಡಿಸುವ ಸಮಾನತೆ, ಐಕ್ಯತೆ, ವ್ಯಕ್ತಿ ಗೌರವ ಮತ್ತು ಪ್ರೀತಿಯ ಮೌಲ್ಯಗಳನ್ನು ಪರಿಣಾಮಕಾರಿಯಾಗಿ ಸಾರುವ ಸಂವಿಧಾನದ ಪ್ರಸ್ತಾವನೆಯನ್ನು ಶಾಲಾ ಕಾಲೇಜುಗಳ ಮಕ್ಕಳು ಹಾಗೂ ಜನರು ಬೃಹತ್ ಸಂಖ್ಯೆಯಲ್ಲಿ ಓದಲಿದ್ದಾರೆ.

ಪ್ರತಿಭಾವಂತ ಕಲಾವಿದರ ಮೂಲಕ ಸಂವಿಧಾನದ ಪ್ರಸ್ತಾವನೆಯಲ್ಲಿ ಇರುವ ಸಮಾಜವಾದ, ಜಾತ್ಯಾತೀತತೆ, ಪ್ರಜಾಸತ್ತಾತ್ಮಕತೆ, ಗಣರಾಜ್ಯ, ಸಮನತೆ, ಭ್ರಾತೃತ್ವ, ವ್ಯಕ್ತಿ ಗೌರವ ಎಂಬ ಅಂಶಗಳ ಕುರಿತಂತೆ ಸಣ್ಣ ಸಣ್ಣ ಕಥನದ ಇಲ್ಲವೇ ನೈಜ ದೃಷ್ಟಾಂತದ ಉದಾಹರಣೆಗಳನ್ನು ಬಳಸಿ ಮಕ್ಕಳಿಗೆ ಸಂವಿಧಾನದ ಪ್ರಸ್ತಾವನೆಯ ಅರ್ಥವನ್ನು ಪರಿಣಾಮಕಾರಿಯಾಗಿ ತಿಳಿಸಿಕೊಡುವ ಕೆಲಸವನ್ನು ಇಲಾಖೆ ಮಾಡಲಿದೆ.

ಅತಿ ಆಧುನಿಕತೆ, ಕೋಮುವಾದ ಹಾಗೂ ಇನ್ನೂ ಅನೇಕ ಸಾಮಾಜಿಕ ಪಿಡುಗುಗಳ ನಡುವೆ, ಸಾಮಾಜಿಕ ನ್ಯಾಯ ಎಂದರೇನು ಎಂಬ ಕಲ್ಪನೆಯನ್ನು ನಾವು ಅರಿತು ಮುಂದಿನ ಪೀಳಿಗೆಗೆ ಅದನ್ನು ಸಮರ್ಥವಾಗಿ ತಿಳಿಸಿಕೊಡದೇ ಹೋದರೆ ಕಷ್ಟಪಟ್ಟು ಗಳಿಸಿರುವ ಜನರ ಸ್ವಾತಂತ್ರ್ಯದ ದನಿಯಾದ ಪ್ರಜಾಪ್ರಭುತ್ವವು ಕ್ರಮೇಣ ಮಾಯವಾಗಲಿದೆ.

ಒಮ್ಮೆ ಪ್ರಜಾಪ್ರಭುತ್ವ ಮಾಯವಾದರೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹೇಳಿದಂತೆ ಜನರು ” ನಾಯಿ ನರಿಗಳಂತೆ ಬದುಕಬೇಕಾಗುತ್ತದೆ”. ಈ ಕಾರಣಕ್ಕಾಗಿಯೇ ಅಂತರಾಷ್ಟ್ರೀಯ ಪ್ರಜಾಪ್ರಭುತ್ವದ ದಿನವು ಕರ್ನಾಟಕದ ಪಾಲಿಗೆ ಅತ್ಯಂತ ಮಹತ್ವ ಪಡೆದುಕೊಂಡಿದೆ. ಈಗಾಗಲೇ 2 ಲಕ್ಷಕ್ಕೂ ಹೆಚ್ಚು ವಿಧ್ಯಾರ್ಥಿಗಳು ಪೀಠಿಕೆ ಓದಲು ನೋಂದಣಿ ಮಾಡಿಕೊಂಡಿದ್ದಾರೆ.

 

 

Karnataka Files
Author: Karnataka Files

Leave a Comment

RELATED LATEST NEWS

error: Content is protected !!