ಕೃಷ್ಣಾಷ್ಟಮಿ ಬಂತೆಂದರೆ ಅದೆಷ್ಟೋ ಸಡಗರ. ಮಗುವಿಗೆ ಕೃಷ್ಣನ ವೇಷ ಧರಿಸಿ ಖುಷಿಪಡುವ ತಾಯಂದಿರು ಮುದ್ದು ಕಂದಮ್ಮಗಳ ಚೇಷ್ಟೆಯ ಬಗ್ಗೆ ಆಡುತ್ತಾ ಸಂತೋಷ ಪಡುತ್ತಾರೆ. ಕೃಷ್ಣ ಜನ್ಮಾಷ್ಟಮಿಗೆ ವೇದಿಕೆ ಮೇಲೆ ತನ್ನ ಮಗು ಕೃಷ್ಣನ ವೇಷ ಧರಿಸಬೇಕು ಎನ್ನುವ ಆಸೆ ಪಾಲಕರದ್ದು. ಮಕ್ಕಳಿಗೆ ಕೃಷ್ಣಾಷ್ಟಮಿ ಎಂದರೆ ಅದೊಂತರಾ ಖುಷಿ.
ಮಕ್ಕಳಿಗೆ ಧೋತಿ, ಶಾಲು, ಕಿರೀಟದ ತುತ್ತ ತುದಿಗೆ ನವಿಲಿನ ಗರಿ, ಕೈಯಲ್ಲಿ ಕೊಳಲು, ಹಣೆಗೆ ಚೆಂದನೆಯ ನಾಮ, ತುಟಿಯ ಸುತ್ತ ಬೆಣ್ಣೆ, ಆಭರಣ ರೂಪದ ಮಾಲೆ ತೊಡಿಸಿ, ಕಿವಿ ಓಲೆ, ಕೈಗೆ ಬಳೆಯ ಜತೆ ತೋಳಿಗೆ ಆಭರಣ ಹಾಕಿ ಮಗುವನ್ನು ನಾನಾ ವಿಧದಲ್ಲಿ ಶೃಂಗರಿಸುತ್ತಾರೆ. ಬಳ್ಳಾರಿಯ ದಕ್ಷಿತ್ ಪಿ ಸಹ ಇವತ್ತು ಕೃಷ್ಣನಾಗಿ ವಿಭಿನ್ನವಾಗಿ ಗೋಚರಿಸಿದ. ಆತನ ತುಂಟಾಟ ಮನೆಯವರಿಗೆಲ್ಲ ಖುಷಿ ಕೊಟ್ಟಿತು.
