ಸನಾತನ ಧರ್ಮದ ಕುರಿತು ತಮಿಳುನಾಡಿನ ಸಚಿವ ಉದಯನಿಧಿ ಸ್ಟ್ಯಾಲೀನ ಹೇಳಿಕೆಗೆ ಪ್ರತ್ತ್ಯುತ್ತರ ಕೊಡಿ ಎಂಬ ಪ್ರಧಾನಿ ನೀಡಿರುವ ಕರೆ ಪ್ರಚೋದನಾತ್ಮಕವಾಗಿದೆ. ಪ್ರಧಾನಿಗಳು ಕೊಡಲೇ ತಾವು ನೀಡಿರುವ ಕರೆಯನ್ನು ಹಿಂದಕ್ಕೆ ಪಡೆಯಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಟ್ವಿಟ್ಟರ್ ಮೂಲಕ ಪ್ರಧಾನಿ ನರೇಂದ್ರ ಮೋದಿಯವರನ್ನು ಆಗ್ರಹಿಸಿರುವ ಸಿದ್ದರಾಮಯ್ಯ, ವಿಷಯ, ವಿದ್ಯಮಾನಗಳು ಏನೇ ಇರಲಿ, ಯಾರಾದರು ತಪ್ಪು ಮಾಡಿದ್ದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು. ಅದನ್ನು ಬಿಟ್ಟು ಪ್ರಚೋದನಾತ್ಮಕ ಹೇಳಿಕೆ ಸರಿಯಲ್ಲ ಎಂದು ಹೇಳಿದ್ದಾರೆ. ಇದು ಕಾನೂನನ್ನು ಕೈಗೆತ್ತಿಕೊಳ್ಳಲು ನೀಡಿದ ಕರೆ ಅಂತ ಭಾವಿಸಬೇಕಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.