ಹುಬ್ಬಳ್ಳಿ ಧಾರವಾಡ ಅವಳಿ ನಗರ, ಅತೀ ವೇಗವಾಗಿ ಬೆಳೆಯುತ್ತಿರುವ ನಗರಗಳಾಗಿವೆ. ಇವೆರಡು ನಗರಗಳು ಸ್ಮಾರ್ಟ್ ಸಿಟಿ ಯೋಜನೆಗೆ ಭಾಜನವಾಗಿವೆ. ಆದ್ರೆ ಸ್ವಚ್ಛತೆ ಅನ್ನೋದು ದೂರದ ಮಾತಾಗಿದೆ.
ಅವಳಿ ನಗರದಲ್ಲಿ ಪ್ರತಿ ದಿನ ಇನ್ನೂರು ಟನ್ ತ್ಯಾಜ್ಯ ಸಂಗ್ರಹವಾಗುತ್ತದೆ. ಎಲ್ಲಾ ಪ್ರದೇಶಗಳಲ್ಲಿ ಪೌರ ಕಾರ್ಮಿಕರು ಮನೆ ಮನೆಗೆ ತೆರಳಿ ಕಸ ಸಂಗ್ರಹಿಸಿದರು. ಕೆಲವರು ಬೇಕಾಬಿಟ್ಟಿಯಾಗಿ ಕಸ ಚೆಲ್ಲುತ್ತಿದ್ದಾರೆ.
ಇದರಿಂದ ರೋಸಿ ಹೋಗಿರುವ ಪಾಲಿಕೆ ಸಿಬ್ಬಂದಿ ಹೊಸ ಐಡಿಯಾ ಹುಡುಕಿದ್ದಾರೆ. ಸಿಕ್ಕ ಸಿಕ್ಕಲ್ಲಿ ಕಸ ಚೆಲ್ಲುವ ಸ್ಥಳಗಳಲ್ಲಿ ರಂಗೋಲಿ ಬಿಡಿಸಿ, ಕಸ ಚೆಲ್ಲುವವರಿಗೆ ರಂಗೋಲಿ ಸ್ವಾಗತ ನೀಡುತ್ತಿದ್ದಾರೆ. ಅರಿವು ಮೂಡಿಸುವ ಕಾರ್ಯವನ್ನು ಪೌರ ಕಾರ್ಮಿಕರು ಮುಂದುವರೆಸಿದ್ದಾರೆ. ಧಾರವಾಡದ ಮಾಳಮಡ್ಡಿ, ಹುಬ್ಬಳ್ಳಿಯ ಡಾಕಪ್ಪನ ಸರ್ಕಲ ಸೇರಿದಂತೆ ಎಲ್ಲಾ ಕಡೆಗೆ ಸ್ವಚ್ಛತೆಯ ಅರಿವು ಮೂಡಿಸುತ್ತಿದ್ದಾರೆ.
