ಪ್ರತಿಷ್ಟಿತ ಕರ್ನಾಟಕ ಟೇಬಲ್ ಟೆನಿಸ್ ಸಂಸ್ಥೆಗೆ ಅಧ್ಯಕ್ಷರಾಗಿ ಯುವ ಕಾಂಗ್ರೇಸ್ ನಾಯಕ ರಕ್ಷಾ ರಾಮಯ್ಯ ಆಯ್ಕೆಯಾಗಿದ್ದಾರೆ. ಈ ಮೊದಲು ಸಚಿವ ಪ್ರಲ್ಲಾದ ಜೋಶಿ ಅಧ್ಯಕ್ಷರಾಗಿದ್ದರು. ಮುಂದಿನ ನಾಲ್ಕು ವರ್ಷಗಳ ಪಧಾಧಿಕಾರಿಗಳ ಆಯ್ಕೆಯು ನಡೆದಿದ್ದು, ಕರ್ನಾಟಕದಲ್ಲಿ ರಾಷ್ಟ್ರ ಮಟ್ಟದ ಟೇಬಲ್ ಟೆನಿಸ್ ಪಂದ್ಯವನ್ನು ನಡೆಸಲು ನೂತನ ಸಮಿತಿ ಉತ್ಸುಕವಾಗಿದೆ. ರಕ್ಷಾ ರಾಮಯ್ಯ ಸಧ್ಯ ರಾಷ್ಟ್ರೀಯ ಯುವ ಕಾಂಗ್ರೇಸ್ಸಿನ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಜಿಮಖಾನಾ ಕ್ಲಬ್ ನಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ರಕ್ಷಾ ಅವಿರೋಧವಾಗಿ ಆಯ್ಕೆಯಾದರು.
