ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ, ಜೆಡಿಎಸ್ ಬಗ್ಗೆ ಮೈತ್ರಿ ಮಾಡಿಕೊಂಡಿದ್ದರ ಬಗ್ಗೆ ನನಗೆ ಯಾವದೇ ಅಧಿಕೃತ ಮಾಹಿತಿ ಇಲ್ಲ ಎಂದು ಕೇಂದ್ರ ಸಚಿವ ಪ್ರಲ್ಲಾದ ಜೋಶಿ ತಿಳಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು, ನಾನು ಕೇಂದ್ರ ಸಚಿವ, ಮೈತ್ರಿ ಬಗ್ಗೆ ನನಗೆ ರಾಷ್ಟ್ರೀಯ ಅಧ್ಯಕ್ಷರು ಅಥವಾ ಪ್ರಧಾನಮಂತ್ರಿಗಳು ಮೈತ್ರಿಯಾಗಿದ್ದರ ಬಗ್ಗೆ ಹೇಳಿಲ್ಲ. ಹೇಳಿದ ನಂತರ ನಾನು ಪ್ರತಿಕ್ರೀಯೆ ನೀಡುತ್ತೇನೆ ಎಂದರು. ಮೈತ್ರಿ ನಿರ್ಣಯದ ಬಗ್ಗೆ ಬೊಮ್ಮಾಯಿಯವರು ಸ್ವಾಗತ ಮಾಡಿದ್ದಾರೆ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಪ್ರಲ್ಲಾದ ಜೋಶಿ, ಬೊಮ್ಮಾಯಿ ಸ್ಥಳೀಯ ಮಟ್ಟದಲ್ಲಿ ಹೇಳಿರಬಹುದು, ನಾನು ಕೇಂದ್ರದ ಸಚಿವ ಎಂದು ಹೇಳಿದರು.
