ಖ್ಯಾತ ಸ್ವಾಮೀಜಿ ಕೋಡಿ ಮಠದ ಶ್ರೀಗಳು ಧರ್ಮದ ಕುರಿತು ಹೊಸ ವ್ಯಾಖ್ಯಾನ ನೀಡಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು ಹಿಂದೂ ಧರ್ಮದ ಹುಟ್ಟಿನ ಬಗ್ಗೆ ಹೇಳಿಕೆ ನೀಡಿದ್ದಾರೆ. ಹಿಂದೂ ಧರ್ಮದ ಹುಟ್ಟಿನ ಬಗ್ಗೆ ಹೇಳಿಕೆ ಕೊಟ್ಟಿದ್ದ ಗೃಹ ಸಚಿವ ಪರಮೇಶ್ವರ ಕುರಿತು ಮಾತನಾಡಿದ ಕೋಡಿ ಶ್ರೀಗಳು, ಸುಖಾ ಸುಮ್ಮನೆ ಯಾಕೆ ಹೇಳ್ತಾರೆ, ನೋವು ಆಗಿದ್ದಕ್ಕೆನೇ ಹೇಳಿರಬೇಕು ಎಂದು ಹೇಳಿದ್ದಾರೆ. ಧರ್ಮದ ವ್ಯಾಖ್ಯಾನವೇ ಬೇರೆ ಇದೆ ಎಂದು ಹೇಳಿದ್ದಾರೆ. ಧರ್ಮ ಹುಟ್ಟಿದ್ದೆ ಭಯದಿಂದ ಎಂದು ಹೊಸ ವ್ಯಾಖ್ಯಾನ ನೀಡಿದರು. ಸಾವಿರಾರು ವರ್ಷಗಳ ದಾಸ್ಯ ಅನುಭವಿಸಿದವರಿಗೆ ಗೊತ್ತು ಎಂದರು.
