ಹುಬ್ಬಳ್ಳಿಯಲ್ಲೊಂದು ಹೇಯ ಕೃತ್ಯ ನಡೆದಿದೆ. ಶಾಂತಿದೂತನ ರುಂಡ ಚೆಂಡಾಡಲಾಗಿದೆ. ಹೊಸೂರು ಬಡಾವಣೆಯಲ್ಲಿ ಶಾಂತಿದೂತ ಪಾರಿವಾಳಗಳ ಮಾರಣ ಹೋಮ ನಡೆಸಲಾಗಿದೆ. ಬಿಳಿ, ಕಪ್ಪು, ಚುಕ್ಕಿ ಸಹಿತ ಬಿಳಿ, ಬಿಳಿ ಪದರಗಳ ರೆಕ್ಕೆ ಬಣ್ಣ, ಕಾಲುಗಳ ಬಣ್ಣ, ಚಂಚು(ಕೊಕ್ಕು) ಬಣ್ಣ, ಬಿಳಿ, ಕಪ್ಪು ಚಂಚು, ಕಾಡಿಗೆ ಕಣ್ಣು, ಕಣ್ಣಿನಲ್ಲಿ ಬಿಳಿ ವೃತ್ತ, ಕೆಂಪು ಕಣ್ಣು…. ಹೀಗೆ ವಿವಿಧ ಚಹರೆಗಳನ್ನು ಹೊಂದಿದ 25 ಕ್ಕೂ ಹೆಚ್ಚು ಪಾರಿವಾಳಗಳನ್ನು ದಾಂಡೇಲಿ ಕುಟುಂಬ ಸಾಕಿತ್ತು.
ಅಕ್ಕರೆಯಿಂದ ಸಾಕಿದ್ದ ಪಾರಿವಾಳಗಳಿಗೆ ಮನೆಯ ಕೋಣೆಯೊಂದರಲ್ಲಿ ಆಶ್ರಯ ನೀಡಲಾಗಿತ್ತು. ಏಕಾಏಕಿ ನಿನ್ನೇ ರಾತ್ರಿ ನಾಲಾಯಕರು ಪಾರಿವಾಳಗಳ ರುಂಡ ಚೆಂಡಾಡಿದ್ದಾರೆ. ಪ್ರಕರಣ ಇದೀಗ ವಿಧ್ಯಾನಗರ ಪೊಲೀಸ ಠಾಣೆ ಮೆಟ್ಟಲೇರಿದ್ದು, ತನಿಖೆ ನಡೆದಿದೆ.
