Download Our App

Follow us

Home » ಶಿಕ್ಷಣ » ಸರ್ರ್ ಒಂದಕ್ಕ್ ಬಂದೈತಿ……..

ಸರ್ರ್ ಒಂದಕ್ಕ್ ಬಂದೈತಿ……..

ಸಣ್ಣವರಿದ್ದಾಗ ಸಾಲಿಗೆ ಹೋಗೋದಂದ್ರ ಅದರ ಖುಷಿನ್ ಬ್ಯಾರೇ ನೋಡ್ರಿ. ಹರಕ ಚಡ್ಡಿ ಆದ್ರೂ ಪರ್ವಾಗಿಲ್ಲ, ಹುಡುಗ್ರು ಸಾಲಿಗೆ ಮಾತ್ರ ಓಡೋಡಿ ಹೋಗ್ತೀದ್ರ. ಸ್ವಲ್ಪ್ ತಡ ಆಗಿ ಹೋದ್ರ, ಮಾಸ್ತರ್ ಛಡಿ ಏಟ್ ಕೊಡ್ತಿದ್ರ. ಯಾರ್ ಮೊದ್ಲ ಸಾಲಿಗೆ ಹೋಗ್ತಿದ್ರ ಅವರಿಗೆ ಸಾಲಿ ಕಸಾ ಹೊಡಿಲ್ರೆ ಮಕ್ಳ್ ಅಂತ ಮಾಸ್ತರ ದಬಾಯಿಸ್ತಿದ್ರ. ಮಾಸ್ತರಗಳು ಆವಾಗ ಹಂಗ ಇದ್ರ. ಪಾಠಾನು ಮಸ್ತ ಮಾಡ್ತಿದ್ರ. ಹರಕ್ ಚಡ್ಡಿ ಹಾಕ್ಕೊಂಡ್ ಬಂದ್ರು ಹುಡುಗ್ರು ಮಾತ್ರ ಹುಷಾರ್ ಇದ್ರ.

ಹುಡುಗ್ರ ಅಂದ ಮ್ಯಾಲ್ ಸುಮ್ನ್ ಏನ್ರಿ. ಆವಾಗಾವಾಗ್ ಕಿತಾಪತಿ ಮಾಡ್ತಾ ಪಾಠಾ ಕೇಳ್ತಿದ್ರ. ಸರ್ರ ಒಂದಕ್ಕ್ ಬಂದಾವ್ರಿ ಅಂತೇಳಿ ಕಿರುಬಳ್ಳ ಎತ್ತಿ ಸೊನ್ನಿ ಮಾಡ್ತಿದ್ರ. ಈಗರ್ ಬಂದಿ ಮಗನಾ ಮನಿಯಿಂದ ಸಾಲಿಗೆ, ಬಂತೆನ್ ನಿನಗ ಒಂದಕ್ಕ್ ಅಂತ ದಬಾಯಿಸಿ, ಹೋಗಿ ಬಾ ಹೋಗ್, ಇಲ್ಲ ಅಂದ್ರ್ ಇಲ್ಲೇ ಮಾಡೋ ಮಗಾನೀ ಅಂತ ಅಂತಿದ್ರು. ಅಂದಂಗ ನಿಮಗೂ ಸಾಲ್ಯಾಗ್ ಒಂದಕ್ಕ್ ಬಂದಿದ್ದ್ ನೆನಪ್ ಬರ್ತಾವಲ್ರಿ……..

Karnataka Files
Author: Karnataka Files

Leave a Comment

RELATED LATEST NEWS

Top Headlines

ಗಮನ ಸೆಳೆದ ಸೌಥ್ ಇಂಡಿಯಾ ಮೀಡಿಯಾ ಅವಾರ್ಡ್

TNIT ಮೀಡಿಯಾ ನಿನ್ನೆ ಸುದ್ದಿಗೋಷ್ಟಿ ನಡೆಸಿ, TNIT ಸೌಥ್ ಇಂಡಿಯಾ ಮೀಡಿಯಾ ಅವಾರ್ಡ್ ಕಾರ್ಯಕ್ರಮದ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದೆ.   ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಗಣೇಶ ಕಾಸರಗೋಡು ಅವರು

Live Cricket

error: Content is protected !!