ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ತಾವು ಆಯ್ತು ತಮ್ಮ ಕೆಲಸ ಆಯ್ತು ಅನ್ನೋ ಮನಸ್ಥಿತಿಯ ಸಚಿವ. ಹೆದ್ದಾರಿ ಸಚಿವರಾದ ಬಳಿಕ ನಿತಿನ್ ಗಡ್ಕರಿ ಇತಿಹಾಸ ನಿರ್ಮಿಸುತ್ತ ಹೊರಟಿದ್ದಾರೆ. ಸಧ್ಯ ಗಡ್ಕರಿ, ಸದ್ದಿಲ್ಲದೆ ಕಾರ್ಗಿಲ್ ಜನ್ಸ್ಕಾರ್ ನಡುವೆ 31.5 ಕಿಲೋಮೀಟರ್ ರಸ್ತೆಯ ನವಿಕರಣ ಹಾಗೂ ಅಗಲಿಕರಣ ನಿರ್ಮಾಣ ಕಾಮಗಾರಿ ಮಾಡುತ್ತಿದ್ದಾರೆ.
ಈ ಯೋಜನೆ 8 ಹಂತಗಳಲ್ಲಿ ನಡೆದಿದ್ದು, ಈಗಾಗಲೇ 5 ಹಂತದ ಕಾಮಗಾರಿ ಪೂರ್ಣಗೊಂಡಿದೆ. ಮುಂಬರುವ ಬರುವ ಮಾರ್ಚ ಹೊತ್ತಿಗೆ 6 ಮತ್ತು 7 ನೇ ಹಂತದ ಕಾಮಗಾರಿ ಮುಗಿಸುವದಾಗಿ ಗಡ್ಕರಿ ಹೇಳಿದ್ದಾರೆ.
13 ಪ್ರಮುಖ ಸೇತುವೆ, 18 ಚಿಕ್ಕ ಸೇತುವೆ, 620 ತಿರುವು ರಸ್ತೆಗಳನ್ನು ಒಳಗೊಂಡಿದೆ. ಈ ರಸ್ತೆ ನಿರ್ಮಾಣದಿಂದ ಲಡಾಖ್ ನ ಆರ್ಥಿಕ ಬೆಳವಣಿಗೆಗೆ ಸಹಾಯವಾಗಲಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಗಡ್ಕರಿ ಈಗಾಗಲೇ 2018-19ರಲ್ಲಿ ಒಟ್ಟು 10,900 ಕಿಲೋಮೀಟರ್,
2019-20 ರಲ್ಲಿ 10,200 ಕಿಲೋಮೀಟರ್, 2020-21ರಲ್ಲಿ 13,300 ಕಿಲೋಮೀಟರ್ ಮತ್ತು 2021-22ರಲ್ಲಿ 10,500 ಕಿಲೋಮೀಟರ್, 2022-23ರಲ್ಲಿ 10,300 ಕಿಲೋಮೀಟರ್ ರಸ್ತೆ ನಿರ್ಮಿಸಿದ್ದಾರೆ.
