ಹಿಂದುತ್ವದ ಪ್ರಖರ ಭಾಷಣಕಾರ್ತಿ ಎಂದೇ ರಾಜ್ಯದಾಧ್ಯಂತ ಸುದ್ದಿ ಮಾಡಿದ್ದ ಚೈತ್ರಾ ಕುಂದಾಪುರಳನ್ನು, ಉಡುಪಿಯಲ್ಲಿ ಸಿ ಸಿ ಬಿ ಪೊಲೀಸರು ಬಂದಿಸಿದ್ದಾರೆ.
ಚೈತ್ರಾ ಕುಂದಾಪುರ ಮೇಲೆ ಏನಿದು 7 ಕೋಟಿ ವಂಚನೆ ಆರೋಪ
ಉಡುಪಿಯ ಬೈಂದೂರಿನ ಗೋವಿಂದಬಾಬು ಪೂಜಾರಿಗೆ, ಬಿಜೆಪಿಯ MLA ಟಿಕೇಟ್ ಕೊಡಿಸುವದಾಗಿ ಚೈತ್ರಾ ಕುಂದಾಪುರ ವಂಚಿಸಿದ್ದಾಳೆ ಎಂದು ಆರೋಪಿಸಲಾಗಿದೆ. ಗೋವಿಂದಬಾಬು ಪೂಜಾರಿಗೆ ಪ್ರಸಾದ ಬೈಂದೂರು ಎಂಬಾತ ಚೈತ್ರಾಳ ಪರಿಚಯ ಮಾಡಿಸಿದ್ದ. 2023 ರ ವಿಧಾನಸಭೆ ಚುನಾವಣೆಯಲ್ಲಿ, ನನಗೆ ಬಿಜೆಪಿ ಹಾಗು ಆರ್ ಎಸ್ ಎಸ್ ವರಿಷ್ಟರಿಗೂ ಹತ್ತಿರವಿದ್ದೇನೆ, ಹಾಗೂ ಪ್ರಧಾನಿ ಕಾರ್ಯಾಲಯದಲ್ಲಿ ಪ್ರಭಾವಿಯಾಗಿದ್ದು,ಸುಪ್ರೀಂಕೋರ್ಟ ಜಡ್ಜ್ ಗಳಿಗೂ ಅಪ್ತಲಾಗಿದ್ದೇನೆ. ಅವರೆಲ್ಲರ ಪ್ರಭಾವ ಬಳಸಿ ಟಿಕೇಟ್ ಕೊಡಿಸುತ್ತೇನೆ ಎಂದು ಚೈತ್ರಾ ಕುಂದಾಪುರ ನಂಬಿಸಿದ್ದಳು. ನಂತರ ಚೈತ್ರಾ, ರಾಷ್ಟ್ರೀಯ ನಾಯಕರ ಜೊತೆ ನಿಕಟ ಸಂಪರ್ಕದಲ್ಲಿರುವ ಚಿಕ್ಕಮಂಗಳೂರಿನ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಗಗನ ಕಡೂರು ಮೂಲಕ ಟಿಕೇಟ್ ಕೊಡಿಸುವದಾಗಿ ಹೇಳಿ, 04-07-2022 ನನ್ನನ್ನು ಚಿಕ್ಕಮಂಗಳೂರಿಗೆ ಕರೆದುಕೊಂಡು ಹೋಗಲಾಯಿತು ಎಂದು ಗೋವಿಂದಬಾಬು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ರಂದು ವಂಚನೆ ಮಾಡಿದ್ದಾಳೆ ಎಂದು ಗೋವಿಂದಬಾಬು ಪೂಜಾರಿ ದೂರಿನಲ್ಲಿ ತಿಳಿಸಿದ್ದಾರೆ.
FIR
ಚಿಕನ್ ಕಬಾಬ್ ಮಾರುವವನನ್ನು ಬಿಜೆಪಿಯ ಕೇಂದ್ರ ಚುನಾವಣಾ ಸಮಿತಿ ಸದಸ್ಯ ಎಂದು ಪರಿಚಯಿಸಿದ ಚೈತ್ರಾ
ವಂಚನೆ ಮಾಡುವ ಉದ್ದೇಶದಿಂದ ಚಿಕನ್ ಕಬಾಬ್ ಮಾರಾಟ ಮಾಡುತ್ತಿದ್ದ ನಾಯ್ಕ ಎಂಬಾತನನ್ನು ಗೋವಿಂದಬಾಬುಗೆ ಪರಿಚಯಿಸಿದ್ದ ಚೈತ್ರಾ, ಚಿಕನ್ ಕಬಾಬ್ ಮಾರಾಟ ಮಾಡುವವನನ್ನು ಕೇಂದ್ರ ಬಿಜೆಪಿಯ ಚುನಾವಣಾ ಸಮಿತಿ ಸದಸ್ಯ ಅಂತ ಪರಿಚಯಿಸಿದ್ದಳು. ನಾಯ್ಕ ಎಂಬಾತನಿಗೆ ಬಿಜೆಪಿ ಕೇಂದ್ರ ಚುನಾವಣಾ ಸಮಿತಿ ಸದಸ್ಯ ಪಾತ್ರ ಮಾಡಲು ನಾಯ್ಕ ಎಂಬಾತನಿಗೆ ಚೈತ್ರಾ ಕುಂದಾಪುರ, 95 ಸಾವಿರ ರೂಪಾಯಿ ಕೊಟ್ಟಿದ್ದಳು. ಅಲ್ಲಿಂದ ವ್ಯವಸ್ಥಿತವಾಗಿ ವಂಚನೆ ಆರಂಭವಾಯ್ತು.
ಚೈತ್ರಾ ಕುಂದಾಪುರ, ಗೋವಿಂದಬಾಬುಗೆ, ಗಗನ ಕಡೂರುನನ್ನು ಪರಿಚಯಿಸಿದ ಬಳಿಕ, ಗಗನ ಗೋವಿಂದಬಾಬುಗೆ ವಿಶ್ವನಾಥಜೀಯನ್ನು ಪರಿಚಯ ಮಾಡಿಸುತ್ತಾನೆ. ಅಚ್ಚರಿಯ ವಿಷಯ ಏನೆಂದರೆ, ರಮೇಶ ಚಿಕ್ಕಮಂಗಳೂರು ಎಂಬಾತನಿಗೆ, ಆರ್ ಎಸ್ ಎಸ್ ವರಿಷ್ಟ ವಿಶ್ವನಾಥಜೀ ಎಂದು ಪಾತ್ರ ಸೃಷ್ಟಿ ಮಾಡಲಾಗಿತ್ತು. ಎಲ್ಲ ಮಾಹಿತಿ ಕಲೆ ಹಾಕಿದ್ದ ಸಿ ಸಿ ಬಿ ಪೊಲೀಸರು ನಿನ್ನೇ ಮದ್ಯರಾತ್ರಿ ಉಡುಪಿಯಲ್ಲಿ ಅವಿತುಕೊಂಡಿದ್ದ ಚೈತ್ರಾ ಕುಂದಾಪುರಳನ್ನು ಬಂಧಿಸಿದ್ದಾರೆ.
ಬಂಧನದ ವಿಡಿಯೋ ಇಲ್ಲಿದೆ ನೋಡಿ
ಅಲ್ಲಿಂದಲೇ ವ್ಯವಹಾರ ಆರಂಭವಾಗುತ್ತದೆ. ಹೀಗೆ ಒಟ್ಟು 7 ಕೋಟಿ ರೂಪಾಯಿಯಷ್ಟು ನನಗೆ ವಂಚನೆ ಮಾಡಲಾಗಿದೆ ಎಂದು ಗೋವಿಂದಬಾಬು, ಬಂಡೆಪಾಳ್ಯ ಪೊಲೀಸ್ ಠಾಣೆಯಲ್ಲಿ ಒಟ್ಟು 7 ಜನರ ಮೇಲೆ ದೂರು ಧಾಖಲಿಸಿದ್ದಾರೆ. ಚೈತ್ರಾ ಕುಂದಾಪುರ, ಗಗನ ಕಡೂರು, ಹೊಸಪೇಟೆಯ ಅಭಿನವ ಹಾಲಶ್ರೀ ಸ್ವಾಮೀಜಿ, ರಮೇಶ ಚಿಕ್ಕಮಂಗಳೂರು, ನಾಯ್ಕ, ಧನರಾಜ ಮತ್ತು ಶ್ರೀಕಂಠ ಮೇಲೆ ದೂರು ಧಾಖಲಾಗಿದೆ.
ಹೊಸಪೇಟೆಯ ಅಭಿನವ ಹಾಲಶ್ರೀ ಸ್ವಾಮೀಜಿ 1 ಕೋಟಿ 50 ಲಕ್ಷ ರೂಪಾಯಿ ವಂಚಿಸಿ, ಈ ಪ್ರಕರಣದಲ್ಲಿ ಶಾಮೀಲಾಗಿದ್ದಾರೆ. ಈ ಬಹುಕೋಟಿ ವಂಚನೆ ಪ್ರಕರಣ ಭಾರಿ ಸದ್ದು ಮಾಡಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಇನ್ನಿಬ್ಬರು ತಪ್ಪಿಸಿಕೊಂಡಿದ್ದು, ಸಿ ಸಿ ಬಿ ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ.