ರಾಷ್ಟ್ರೀಯ ತನಿಖಾ ಸಂಸ್ಥೆ ( ಎನ್ ಐ ಎ ) ನವದೆಹಲಿಯ ವಿಮಾನ ನಿಲ್ದಾಣದಲ್ಲಿ ಭರ್ಜರಿ ಕಾರ್ಯಾಚರಣೆ ನಡೆಸಿದೆ. ಎನ್ ಐ ಎ ಭಯೋತ್ಪಾದಕ ಸಂಚುಕೋರನನ್ನು ಬಂಧಿಸಿದೆ. 2020 ರಿಂದ ತಲೆ ಮರಿಸಿಕೊಂಡಿದ್ದ ಶಿವಮೊಗ್ಗ ಮೂಲದ ಅಲಿ, ನೈರೋಬಿಯಾದಿಂದ ಭಾರತಕ್ಕೆ ಬಂದಿಳಿಯುತ್ತಿದ್ದಂತೆ ವಿಮಾನ ನಿಲ್ದಾಣದಲ್ಲಿ ಎನ್ ಐ ಎ ಬಂಧಿಸಿದೆ. ಬಂಧಿತ ಅಲಿ ಭಯೋತ್ಪಾದಕ ಚಟುವಟಿಕೆಗೆ ಯುವಕರನ್ನು ಪ್ರೋತ್ಸಾಹಿಸುತ್ತಿದ್ದ ಎನ್ನಲಾಗಿದೆ. ಮಂಗಳೂರು ಗೋಡೆಯ ಮೇಲೆ ಗೀಚು ಪ್ರಕರಣ, ಕುಕ್ಕರ ಸ್ಫೋಟ, ಮತ್ತು ಶಿವಮೊಗ್ಗದಲ್ಲಿ ಭಯೋತ್ಪಾದಕ ಸಂಚು ರೂಪಿಸಿದ ಆರೋಪ ಅಲಿ ಮೇಲಿತ್ತು.
