ಗಣೇಶ ಹಬ್ಬಕ್ಕೆ ಬರುವ ಪ್ರಯಾಣಿಕರಿಗೆ ಕೆ ಎಸ್ ಆರ್ ಟಿ ಸಿ ಶಾಕ್ ಕೊಟ್ಟಿದೆ. ಬಸ್ ಟಿಕೇಟ್ ದರದಲ್ಲಿ ಶೇಕಡಾ 20 ರಷ್ಟು ಹೆಚ್ಚು ಮಾಡಿದೆ. ಹುಬ್ಬಳ್ಳಿ ಬೆಂಗಳೂರು, ಬೆಂಗಳೂರು ದಾವಣಗೆರೆ, ಮಂಗಳೂರು, ಹಾಸನ, ಮೈಸೂರು ಮಂಡ್ಯ ಹೀಗೆ ದರ ಹೆಚ್ಚು ಮಾಡಿದೆ. ಪ್ರಯಾಣಿಕರು ಹೆಚ್ಚು ಬೆಲೆ ಕೊಟ್ಟು ಹೋಗಬೇಕಾದ ಪರಿಸ್ಥಿತಿ ಎದುರಾಗಿದೆ. ಬೆಂಗಳೂರಿನಿಂದ ಹುಬ್ಬಳ್ಳಿಗೆ 1160 ಮತ್ತು ವಿಶೇಷ ಬಸ್ಸಿಗೆ 1350 ದರ ನಿಗದಿ ಮಾಡಲಾಗಿದೆ.
