ಮೂಡಿಗೆರೆ ತಾಲೂಕಿನ ಸೋಮನಕಾಡು ಬಳಿ ಐಟಿವ ಚಾರ್ಮಾಡಿ ಘಾಟನಲ್ಲಿ ಲಾರಿಯೊಂದು ನೂರು ಅಡಿ ಆಳ ಇರುವ ಪ್ರಪಾತಕ್ಕೆ ಬಿದ್ದಿದೆ. ಅದೃಷ್ಟಾವಷಾತ ಚಾಲಕ ಹಾಗೂ ಕ್ಲಿನರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸಾಕಷ್ಟು ಮಂಜು ಮತ್ತು ಮಳೆ ಬೀಳುತ್ತಿದ್ದ ಕಾರಣ, ರಸ್ತೆ ಕಾಣದೆ ಲಾರಿ ತಡೆಗೋಡೆಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಲಾರಿ ಪ್ರಪಾತಕ್ಕೆ ಬಿದ್ದಿದೆ. ಲಾರಿ ಪಲ್ಟಿಯಾಗುತ್ತಿದ್ದಂತೆ ಮರಕ್ಕೆ ಸಿಕ್ಕಿ ಹಾಕಿಕೊಂಡಿದೆ. ಹೀಗಾಗಿ ಚಾಲಕ ಮತ್ತು ಕ್ಲಿನರ್ ಬದುಕುಳಿದಿದ್ದಾರೆ. ಲಾರಿಯಲ್ಲಿ ಪುತ್ತೂರಿನಿಂದ ಚಿತ್ರದುರ್ಗಕ್ಕೆ ನೀರಿನ ಬಾಟಲಿ ಸಾಗಿಸುತ್ತಿತ್ತು ಎನ್ನಲಾಗಿದೆ.
