ಧಾರವಾಡ APMC ಯಲ್ಲಿ ತರಕಾರಿ ಬೆಲೆಗಳಲ್ಲಿ ಕುಸಿತವಾಗಿದೆ. ಕಳೆದ ತಿಂಗಳು ತರಕಾರಿ ಬೆಲೆ ಹೆಚ್ಚಳದಿಂದ ಕಂಗಲಾಗಿದ್ದ ಜನ, ಸಧ್ಯಕ್ಕೆ ನಿರಾಳರಾಗಿದ್ದಾರೆ. ಈರುಳ್ಳಿ, ಆಲೂಗಡ್ಡೆ, ಹಸಿಮೆಣಸಿನಕಾಯಿ, ಟಮೆಟೋ, ಹಿರಿಕಾಯಿ, ಸೌತೆಕಾಯಿ, ಸಬ್ಬಸಿಗೆ, ಮೆಂತೆ ಪಲ್ಲೆ, ಕೋತಂಬ್ರಿ ಸೇರಿದಂತೆ ಎಲ್ಲ ಬಗೆಯ ತರಕಾರಿಗಳ ಬೆಲೆಗಳು ಕಡಿಮೆಯಾಗಿವೆ. ಕಳೆದ ತಿಂಗಳು ಆರ್ಭಟಿಸಿದ್ದ ಕೆಂಪು ಸುಂದರಿ ಟಮೇಟೋಗೆ ಕೇಳೋರೆ ಇಲ್ಲದಂತಾಗಿದೆ.
ಯಾವದರ ದರ, ಎಷ್ಟು ಇಲ್ಲಿದೆ ನೋಡಿ
ಪ್ರತಿ ಹತ್ತು ಕೆಜಿ ಈರುಳ್ಳಿ 250 ರಿಂದ 300 ರೂಪಾಯಿ
ಪ್ರತಿ ಹತ್ತು ಕೆಜಿ ಟಮೇಟೋ 50 ರೂಪಾಯಿ ಇಂದ 60 ರೂಪಾಯಿ
ಪ್ರತಿ ಹತ್ತು ಕೆಜಿ ಹಿರಿಕಾಯಿ 80 ರಿಂದ 100 ರೂಪಾಯಿ
ಪ್ರತಿ ಹತ್ತು ಕೆಜಿ ಸೌತೆಕಾಯಿ 20 ರಿಂದ 40 ರೂಪಾಯಿ
ಫ್ಲಾವರ 50 ರೂಪಾಯಿಗೆ ಮೂರು
ಸಬ್ಬಸಿಗೆ 20 ರೂಪಾಯಿಗೆ 5
ಮೆಂತೆ 20 ರೂಪಾಯಿಗೆ 6
ಕೋತಂಬ್ರಿ 35 ರೂಪಾಯಿಗೆ 6
ಹೀಗೆ ಧಾರವಾಡದ apmc ಮಾರುಕಟ್ಟೆಯಲ್ಲಿ ಪ್ರತಿಯೊಂದು ತರಕಾರಿಯ ಬೆಲೆ ಕಡಿಮೆಯಾಗಿದೆ. ಇಲ್ಲಿನ ತರಕಾರಿ ಬೆಳಗಾವಿ ಜಿಲ್ಲೆಯ ಸವದತ್ತಿ, ರಾಮದುರ್ಗ, ಬೈಲಹೊಂಗಲ, ಉತ್ತರ ಕನ್ನಡದ ಹಳಿಯಾಳ, ದಾಂಡೇಲಿ ಮತ್ತು ಧಾರವಾಡ ಜಿಲ್ಲೆಯ ಎಲ್ಲಾ ತಾಲೂಕುಗಳಿಗೆ ಹೋಗುತ್ತದೆ.
ಓದುಗರ ಗಮನಕ್ಕೆ – ನಾಳೆಯಿಂದ ನಿಮ್ಮ ನೆಚ್ಚಿನ ಕರ್ನಾಟಕ ಫೈಲ್ಸ್ ನಲ್ಲಿ ಪ್ರತಿ ದಿನದ ತರಕಾರಿ ಬೆಲೆ ಲಭ್ಯವಾಗಲಿದೆ. ಇಂದೇ karnatakafiles.com ಗೆ subscribe ಆಗಿರಿ.