ಉತ್ತರ ಕರ್ನಾಟಕದ ಹೆಬ್ಬಾಗಿಲು ಹುಬ್ಬಳ್ಳಿ, ಗಣೇಶ ಹಬ್ಬದ ಸಡಗರಕ್ಕೆ ಸಾಕ್ಷಿಯಾಗಿದೆ. ಹುಬ್ಬಳ್ಳಿ ಮಹಾನಗರದಲ್ಲಿ ಗಣೇಶ ಚತುರ್ಥಿಯನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ.
ಉತ್ತರ ಕರ್ನಾಟಕದ ಗಮನ ಸೆಳೆಯುವ ಹುಬ್ಬಳ್ಳಿ ಗಣೇಶ ಹಬ್ಬದ ಮೇನ್ ಅಟ್ರಾಕ್ಷನ್ ಅಂದ್ರೆ ಅದು ” ಹುಬ್ಬಳ್ಳಿ ಕಾ ರಾಜಾ “. ಲೇಟ ಆದ್ರೂ, ಲೇಟೆಸ್ಟ್ ಆಗಿ ಎಂಟ್ರಿ ಕೊಟ್ಟ “ಹುಬ್ಬಳ್ಳಿ ಕಾ ರಾಜಾ ” ನನ್ನು ಭಕ್ತರು ಅದ್ದೂರಿಯಾಗಿ ಬರಮಾಡಿಕೊಂಡರು. ಗಣಪತಿ ಬಪ್ಪಾ ಮೋರಯಾ ಘೋಷಣೆಗಳು ಮೊಳಗಿದವು.