ಮೂರು ದಿನಗಳ ಕಾಲ ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಪ್ರತಿಷ್ಟಾಪನೆಗೊಂಡಿದ್ದ ಗಣೇಶನ ವಿಸರ್ಜನೆ ಇಂದು ನಡೆಯಿತು. ವಿಸರ್ಜನಾ ಕಾರ್ಯಕ್ರಮದಲ್ಲಿ ವಿಜಯಪೂರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ, ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ, ಎಮ್ ಆರ್ ಪಾಟೀಲ ಭಾಗವಹಿಸಿದ್ದರು. ಈದ್ಗಾ ಮೈದಾನದಿಂದ ಹೊರಟ ಗಣೇಶನ ಮೆರವಣಿಗೆ ಹೊಸೂರನಲ್ಲಿರುವ ಪಾಲಿಕೆಯ ಭಾವಿ ವರೆಗೆ ನಡೆಯಿತು. ಮೆರವಣಿಗೆಯಲ್ಲಿ 5 ಸಾವಿರಕ್ಕೂ ಹೆಚ್ಚು ಜನ ಭಾಗವಹಿಸಿದ್ದರು. ವಿಸರ್ಜನೆಗೂ ಮುನ್ನ ಬಸನಗೌಡ ಪಾಟೀಲ್ ಯತ್ನಾಳ ಮಾತು ಹಿಂದೂ ಕಾರ್ಯಕರ್ತರನ್ನು ಹುರಿದುಂಬಿಸಿತು. ಭಕ್ತರ ಕರಡಾತನದ ಮಧ್ಯೆ ಈದ್ಗಾ ಗಣೇಶನನ್ನು ಅದ್ದೂರಿಯಾಗಿ ಬೀಳ್ಕೊಡಲಾಯಿತು. ಮೆರವಣಿಗೆಯುದ್ದಕ್ಕೂ ಬಿಗಿ ಪೊಲೀಸ್ ಬಂದೂಬಸ್ತ ಮಾಡಲಾಗಿತ್ತು.
ಹುಬ್ಬಳ್ಳಿ ಈದ್ಗಾ ಗಣೇಶ ವಿಸರ್ಜನೆ. ಯತ್ನಾಳ ಸೇರಿದಂತೆ ಹಲವು ಬಿಜೆಪಿ ಶಾಸಕರ ಉಪಸ್ಥಿತಿ.
RELATED LATEST NEWS
Top Headlines
3 ಕೋಟಿ ವೆಚ್ಚದ ಸಾಧನಕೇರಿ ಕೆರೆ ಕಾಮಗಾರಿಯಲ್ಲಿ ಗೋಲ್ಮಾಲ್. ವಿನಯ ಕುಲಕರ್ಣಿಯವರ ಹೆಸರಿಗೆ ಕಳಂಕ ತರಲು ಪ್ರಯತ್ನ
24/01/2025
3:00 pm
ಜ್ಞಾನಪೀಠ ಪುರಸ್ಕೃತ ಡಾ. ದ. ರಾ. ಬೇಂದ್ರೆಯವರ ಕಾವ್ಯಕ್ಕೆ ಸ್ಫೂರ್ತಿ ನೀಡಿದ್ದ ಸಾಧನಕೇರಿ ಕೆರೆಯಲ್ಲಿ ಕಾಮಗಾರಿ ಹೆಸರಲ್ಲಿ ಅಧಿಕಾರಿಗಳು ಕೋಟ್ಯಾಂತರ ರೂಪಾಯಿ ಗೋಲ್ಮಾಲ್ ನಡೆಸಿದ್ದಾರೆ. ಹುಬ್ಬಳ್ಳಿ ಧಾರವಾಡ
ಬಿಗ್ ಬಾಸ್ ಸ್ಪರ್ಧಿ, ಲಾಯರ್ ಜಗದೀಶ ಮೇಲೆ ಹಲ್ಲೆ
23/01/2025
9:19 pm
ಧಾರವಾಡ ಜಿಲ್ಲೆಯ ರಾಜಕಾರಣಕ್ಕೆ ಭವಿಷ್ಯದ ಯುವ ನಾಯಕರ ಎಂಟ್ರಿ
23/01/2025
4:57 pm
ಗೂಡ್ಸ್ ವಾಹನ ಪಲ್ಟಿ- 25 ಜನ ನರೇಗಾ ಕಾರ್ಮಿಕರಿಗೆ ಗಾಯ
23/01/2025
4:29 pm