ಹುಬ್ಬಳ್ಳಿ ಈದ್ಗ ಮೈದಾನದಲ್ಲಿ ಗಣೇಶ ಪ್ರತಿಷ್ಟಾಪನೆ ಮಾಡಿದ್ದೇವೆ. ಶಾಂತಿ ರೀತಿಯಿಂದ ಹಬ್ಬ ಆಚರಣೆ ಮಾಡಿದ್ದೇವೆ. ಹುಬ್ಬಳ್ಳಿ ಅಂಜುಮನ್ ಸಂಸ್ಥೆ ಮತ್ತೆ ಕಿರಿಕ್ ಮಾಡಿದರೆ, ಮಸೀದಿಯಲ್ಲಿ ಗಣೇಶನನ್ನು ಪ್ರತಿಷ್ಟಾಪನೆ ಮಾಡುವ ತಾಕತ್ತು ನಮಗಿದೆ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ ಮುತಾಲಿಕ್ ಎಚ್ಚರಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಈದ್ಗ ಗಣೇಶನ ವಿಸರ್ಜನೆಗೆ ಬಂದಿರುವ ಮುತಾಲಿಕ್, ಹಿಂದೂ ಸಮಾಜ ಜಾಗೃತಿಯಾಗಿದೆ ಎಂದು ತಿಳಿಸಿದರು. ಮೈದಾನ ಪಾಲಿಕೆಯ ಆಸ್ತಿ ಎಂದು ನ್ಯಾಯಾಲಯ ಹೇಳಿದರು, ಯೂಸುಫ ಸವಣೂರು ಕೋರ್ಟಗೆ ಹೋಗುವದಾಗಿ ಹೇಳಿದ್ದು, ನಾವು ಸಹ ಮೈದಾನದಲ್ಲಿ ನಮಾಜ ಮಾಡಲು ಅವಕಾಶ ಕೊಡದಿರುವಂತೆ ಕೋರ್ಟಗೆ ಹೋಗುವದಾಗಿ ತಿಳಿಸಿದರು.