ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯರಾಗಿ ಮುಸ್ತಫಾ ಹುಸೇನ ಸೈಯ್ಯದ ಅಜೀಜ್ ನೇಮಕಗೊಂಡಿದ್ದಾರೆ. ರಾಜ್ಯಪಾಲ ಥಾವರಚಂದ ಗೆಲ್ಹೋಟ ಅವರು ಮುಸ್ತಫಾ ಹುಸೇನ ಸೈಯ್ಯದ ಅಜೀಜರರನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಜಿಲ್ಲಾ ನ್ಯಾಯಾಧೀಶರಾಗಿರುವ ಮುಸ್ತಫಾ ಅವರು ಸಧ್ಯ ಮಧ್ಯಸ್ಥಿಕೆ ಕೇಂದ್ರದ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ.
